Haridasa Sahitya — Vyasadasa

Yogi Vyasarayaremba vichithra

ಯೋಗಿ ವ್ಯಾಸರಾಯರೆಂಬ ವಿಚಿತ್ರ

Composer: Sri Vijayeendra Teertharu · Deity: Vedavyasa · Genre: Dasara Pada

Kannada lyrics

ಯೋಗಿ ವ್ಯಾಸರಾಯರೆಂಬ ವಿಚಿತ್ರ ಮೇಘ ಬೇಗ ವಿಷ್ಣುಪದವ ತೋರುಸುತ್ತ ಬಂತಿದೆಕೊ ||pa|| ಮಾಯಿಮತವೆಂಬ ತಾರಾಮಂಡಲವ ಮುಸುಕುತ್ತ ವಾಯುಗತಿಯಂತೆ ಗಮಿಸುತಲಿ ಹೇಯ ಕಾಮಾದಿಗಳೆಂಬ ರಜವನಡಗಿಸುತ ನಾಯಕನುಪೇಂದ್ರನಾಜ್ಞೆಯ ಪಡೆದು ||1|| ಅಂಗಜನಯ್ಯನೆ ಪರನೆಂದು ಫುಡಿಫುಡಿಸುತ್ತ ಕಂಗಳೆಂಬ ಮಿಂಚನೆ ನೆರಹಿ ಲೋಕದಿ ಹಿಂಗದೆ ಪರಿವ ಅಜ್ಞಾನ ನವೆಂಬ ಕತ್ತಲೆಯ ಭಂಗಿಸಿ ಸುರಪಥವ ತೋರಿಸುತ್ತ ||2|| ಸಿರಿಯರಸನ ಸಮ್ಯಕ್ ಜ್ಞಾನವೆಂಬ ಪೈರಿಗೆ ಬೇರುಬಿಡಿಸಿ ಹರಿಕಥೆಯೆಂಬ ಮಳೆಗರೆದು ನೆರೆ ಶಿಷ್ಯಮನವೆಂಬ ಕೆರೆತುಂಬಿಸಿ ಕರಗಳೆಂಬ ಭರಕೋಡಿ ಹರಿಸುತ ವಿಜಯೀಂದ್ರನ ಗುರು ||3||

Transliteration

yOgi vyAsarAyareMba vicitra mEGa bEga viShNupadava tOrusutta bantideko ||pa|| mAyimataveMba tArAmanDalava musukutta vAyugatiyante gamisutali hEya kAmAdigaLeMba rajavanaDagisuta nAyakanupEndranAj~jeya paDedu ||1|| angajanayyane paranendu PuDiPuDisutta kangaLeMba mincane nerahi lOkadi hingade pariva aj~jAna naveMba kattaleya Bangisi surapathava tOrisutta ||2|| siriyarasana samyak j~jAnaveMba pairige…