Haridasa Sahitya — Vyasadasa

Yenu olle hariye ninna stuthisi keluvudu

ಏನು ಒಳ್ಳೆ ಹರಿಯೆ ನಿನ್ನ ಸ್ತುತಿಸಿ ಕೇಳುವ್ದು

Composer: Kanakadasaru · Deity: Hari · Genre: Vairagya

Kannada lyrics

ಏನು ಒಲ್ಲೆ ಹರಿಯೇ ನಿನ್ನ ಸ್ತುತಿಸಿ ಕೇಳುವುದು || ಪ || ಜ್ಞಾನ ಭಕ್ತಿ ಕೊಡು ಎಮಗೆ ಇದೊಂದೇ ದೊಡ್ಡದು || ಅ.ಪ || ಒಂದು ನೆವದಿಂದ ಎನ್ನ ಕಾಡಿದವರಿಗೆ ಹೊನ್ನು ಹೆಣ್ಣು ಗಂಡು ಮಕ್ಕಳು ಆಗಲಿ ಅವರಿಗೆ ಕಂದಿ ಕುಂದಿ ಎನ್ನ ಬಾಧೆ ಪಡಿಸಿದವರಿಗೆ ಕನ್ಯಾ ದಾನದ ಫಲ ಬಂದು ತಟ್ಟಲಿ ಅವರಿಗೆ || ೧ || ಹಿಂದೆ ನನ್ನ ಬೈದವರೆಲ್ಲಾ ಚೆಂದಾಗಿರಲಿ ಮುಂದೆ ನನ್ನ ಬೈವುಯವರೆಲ್ಲಾ ಅಂದಣವೇರಲಿ ಕುಂದು ಇಟ್ಟವರೆಲ್ಲ ಕುದುರೆಯ ಕಟ್ಟಿ ಬಾಳಲಿ ಬಂದು ಒದ್ದವರಿಗೆ ಭತ್ತದ ಗದ್ದೆ ಬೆಳೆಯಲಿ || ೨ || ಜನರೊಳಗೆ ಮಾನಭಂಗ ಮಾಡಿದವರಿಗೆ ಜೇನು ತುಪ್ಪ ಸಕ್ಕರೆ ಊಟ ಆಗಲಿ ಅವರಿಗೆ ಹಾನಿ ಬಾರದಂತಹ ಲೋಕ ಆಗಲಿ ಅವರಿಗೆ ಮಹಾನುಭಾವ ಮುಕ್ತಿಯ ಕೊಡುವ ನೆಲೆಯಾ…

Transliteration

yenu olle hariye ninna stuthisi keluvudu gnana bhakthi kodu yanage idhonde doddadu ondu neva dinda nanna kaadidavarige hennu honnu gandu makkalu agali awarige kandi kundhi yenna bhadhe padisidavarige kanya danada phala bandhu tataali awarige||1|| hindhe nanna baidhavarella chendagirali mundhe nanna baivuyavarella andanawerali kundu ittawarella kudereya katti balali bandhu vaddhavarege bhattadha ga…