Haridasa Sahitya — Vyasadasa
Yenu mecchidhe ele henne
ಏನು ಮೆಚ್ಚಿದೆಲೆ ಹೆಣ್ಣೆ ಏನು
Composer: Purandara Dasaru · Deity: Lakshmi Devi · Genre: Bhakti
Kannada lyrics
ಏನು ಮೆಚ್ಚಿದೆಲೆ ಹೆಣ್ಣೆ ಏನು ಮರುಳಾದೆ ||ಪ|| ನೋಟದಿ ಚೆಲುವನಿವನೆಂಬೆನೆ ಚಂಚಲ ಮಾಟದಿ ಚೆಲುವನಿವನೆಂಬೆನೆ ಬೆನ್ನು ಗುಪುಟು ಗೂಟದಂಥ ಹಲ್ಲು ಮೊಳದುದ್ದದೆ ಮೋರೆ ಬೂಟಕತನದಿ ಬಾಯ್ದೆರೆದು ಅಂಜಿಪಗೆ || ಅಣುರೂಪದವನಿವ ನಿಲುವುಳ್ಳ ನರನಲ್ಲ ಬನವ ತರಿವನೆಂತೆ ಕೈಯಲ್ಲಿ ಕೊಡಲಿ ಮನುಜರನು ತಾ ಬಿಟ್ಟು ಕಪಿಗಳನು ಕೂಡುವ ಮನೆ ಮನೆಯನು ಪೊಕ್ಕು ಕದ್ದು ತಿಂಬುವಗೆ || ಗಂಭೀರ ಪುರುಷನಿವನೆಂಬೆನೆ ದಿಗಂಬರ ಅಂಬರದೊಳಗೆ ಕುದುರೆಯ ಕುಣಿಸುವ ಅಂಬುಜಾಕ್ಷ ಸಿರಿಪುರಂದರವಿಠಲನ ಸಂಭ್ರಮದಿ ನೀ ಮೆಚ್ಚಿ ಮದುವ್ಯಾದೆಯಲ್ಲೆ ||
Transliteration
Enu mecchide ele henne-Enu maruladeye |Enu meccideyele henne ||pa|| Notadi celuvanembene chanchalarupa| Matadi celuvane bennali buguti || Gutadante hallu moladudda moreyu | Butakatanadalli baya terevanige ||1|| Anurupadavaniva niluvu ullavanalla | Banava tavarivavanante kaiyali kodali || Anujara bittu kapigala kudi aduva | Manemanegala pokku kaddu timbavanige ||2|| Gambira purushanembene digambara…