Haridasa Sahitya — Vyasadasa

Yenu marulatheyamma

ಏನು ಮರುಳಾದೆಮ್ಮ

Composer: Purandara Dasaru · Deity: Krishna / Govinda / Mukunda · Genre: Bhakti

Kannada lyrics

ಏನು ಮರುಳಾದೆಮ್ಮ ಎಲೆ ರುಕ್ಮಿಣಿ ಹೀನಕುಲ ಗೊಲ್ಲ ಶ್ರೀ ಗೋಪಾಲಕೃಷ್ಣಗೆ ಹಾಸಿಕಿಲ್ಲದೆ ಹಾವಿನ ಮೇಲೆ ಒರಗಿದವ ಹೇಸಿಕಿಲ್ಲದೆ ಕರಡಿಯ ಕೂಡಿದ ಗ್ರಾಸಕಿಲ್ಲದೆ ತೊತ್ತಿನ ಮಗನ ಮನೆಲುಂಡ ದೋಷಕಂಜದೆ ಮಾವನ ಸಿರವ ತರಿದವಗೆ ಕುಂಡಗೋಳಕರ ಮನೆ ಕುಲದೈವವೆನಿಸಿದಗೆ ಮಂಡೆ ಬೋಳರ ಮನಕೆ ಮನದೈವವ ಹಿಂಡು ಗೊಲ್ಲರ ಮನೆ ಹಿರಿಯನೆಂದೆನಿಸುವ ಭಂಡಾಟದ ಗೊಲ್ಲ ಈ ಬಳಗದೊಳಗೆಲ್ಲ ಒಬ್ಬರಲ್ಲಿ ಹುಟ್ಟಿ ಒಬ್ಬರಲ್ಲಿ ಬೆಳೆದ ಒಬ್ಬರಿಗೆ ಮಗನಲ್ಲ ಜಗದೊಳಗೆಲ್ಲ ಅಬ್ಬರದ ದೈವ ಶ್ರೀ ಪುರಂದರವಿಟ್ಠಲನ ಉಬ್ಬುಬ್ಬಿ ಮದುವ್ಯಾದೆ ಉತ್ಸಾಹದಿಂದ

Transliteration

Yenu Marulatheyama ele rukmani|| Heenakula kolla sri gopala krishnanige || Hasigilladha haavina mele oragidhava hesikilladhe karaidya kooditha kraasagilladhe thotthina magana maneloonta dhosaganjane mavena sira tharidhavage||1|| kundakolakara mane kula dhaiva venisidhage mande polara manage manaithavava hindu kollara maneya hariya nendhenisuva pandadadha kolla ee balagatholagella ||2|| obbaralli h…