Haridasa Sahitya — Vyasadasa

Yenu dhanyalo

ಏನು ಧನ್ಯಳೋ

Composer: Purandara Dasaru · Deity: Lakshmi Devi · Genre: Bhakti

Kannada lyrics

ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ ಸಾನುರಾಗದಿಂದ ಹರಿಯ ತಾನೆ ಸೇವೆ ಮಾಡುತಿಹಳೋ ||ಪ| ಕೋಟಿ ಕೋಟಿ ಭೃತ್ಯರಿರಲು ಹಾಟಕಾಂಬರನ ಸೇವೆ ಸಾಟಿಯಿಲ್ಲದೆ ಮಾಡಿ ಪೂರ್ಣನೋಟದಿಂದ ಸುಖಿಸುತಿಹಳೋ || ೧|| ಛತ್ರ ಚಾಮರ ವ್ಯಜನ ಪರ್ಯಂಕ ಪಾತ್ರರೂಪದಲ್ಲಿ ನಿಂತು ಚಿತ್ರಚರಿತನಾದ ಹರಿಯ ನಿತ್ಯಸೇವೆ ಮಾಡುತಿಹಳೋ ||೨|| ಸರ್ವಸ್ಥಳದಿ ವ್ಯಾಪ್ತನಾದ ಸರ್ವದೋಷರಹಿತನಾದ ಸರ್ವವಂದ್ಯನಾದ ಪುರಂದರ ವಿಟ್ಠಲನ್ನ ಸೇವಿಸುವಳೋ ||೩||

Transliteration

Enu dhanyalo lakumi yentha maanyalo saanuraagadinda hariya taane seve maadu tihalu||p|| koti koti bhrityariralu | haatakaambarana seve | saatiyillade maadi | poorna nootadindha sukhisutihalu ||1|| chhatra chaamara vyajana pariyanka | paatra roopadalli nintu | chitra charita naada hariya | nithya seve maadutihalu ||2|| sarvasthaladhi vyaaptanaada | sarva dosharahitanaada | sarva vandhyanaada purand…