Haridasa Sahitya — Vyasadasa
Yelamma kolhapuri
ಏಳಮ್ಮ ಕೊಲ್ಲಾಪುರಧೀಶೆ
Composer: Ambabai · Deity: Lakshmi Devi · Genre: Dasara Pada
Kannada lyrics
ಏಳಮ್ಮ ಕೊಲ್ಲಾಪುರಧೀಶೆ | ಇನ್ನೂ ಭಾಳ ಹೊತ್ತಾಯಿತು ವೈಕುಂಠವಾಸೆ ||pa|| ಸೃಷ್ಟಿಸೆಂದೆನುತ ಆಂಬ್ರಣಿರೂಪದಿಂದ್ಹರಿ ಗಿಷ್ಟ ಸ್ತೋತ್ರವ ಮಾಡಿ ಎಬ್ಬಿಸಬೇಕು ಅಷ್ಟ ಭುಜದ ಲಕುಮಿ ಪ್ರಕೃತಿರೂಪಿಣಿಯಾಗಿ ಸೃಷ್ಟಿಕಾರ್ಯಕೆ ಅನುವಾಗಬೇಕು ||1|| ಸಕಲ ದೇವತೆಗಳ ಸೃಷ್ಟಿ ಮಾಡಲಿಬೇಕು ಮುಕುತಿಯೋಗ್ಯರ ಸೇವೆ ಕೊಳ್ಳಬೇಕು ಸಕಲರೂಪದಲಿ ಶ್ರೀಹರಿಯ ಸೇವಿಸಬೇಕು ಅಕಳಂಕÉ ಆದಿದೇವತೆ ಎನಿಸಬೇಕು ||2|| ಶ್ರೀ ಪದ್ಮಭವೆ ವೆಂಕಟೇಶನ ಕೂಡುತ ನೀ ಪರಿಪರಿ ಲೀಲೆಗೈಯ್ಯಬೇಕು ಗೋಪಾಲಕೃಷ್ಣವಿಠ್ಠಲನ ವಕ್ಷಸ್ಥಳ ವ್ಯಾಪಿಸಿ ಭಕ್ತರ ಕಾಪಾಡಬೇಕು ||3||
Transliteration
Elamma kollapuradhise | innubala hottayitu vaikunthavase ||pa|| Srushtisendenuta ambranirupadimd~hari Gishta stotrava madi ebbisabeku Ashta Bujada lakumi prakrutirupiniyagi Srushtikaryake anuvagabeku ||1|| Sakala devategala srushti madalibeku Mukutiyogyara seve kollabeku Sakalarupadali srihariya sevisabeku Akalanka adidevate enisabeku ||2|| Sri padmabave venkatesana kuduta Ni paripari lilegaiyyabe…