Haridasa Sahitya — Vyasadasa
Yeddu bharuthare
ಎದ್ದು ಬರುತಾರೆ
Composer: Haridasa · Deity: Raghavendra Teertharu · Genre: Dasara Pada
Kannada lyrics
ಎದ್ದು ಬರುತಾರೆ ನೋಡೆ – ಗುರುಗಳು ತಾ ವೆದ್ದು ಬರುತಾರೆ ನೋಡೆ || ಪ || ಮುದ್ದು ಬೃಂದಾವನ ಮಧ್ಯದೊಳಗಿಂದ ತಿದ್ದಿ ಹಚ್ಚಿದ ನಾಮ ಮುದ್ರೆಗಳಿಂದೊಪ್ಪುತ || ಅ || ಗಳದೊಳು ಶ್ರೀ ತುಳಸಿ ನಳಿನಾಕ್ಷಿ ಮಾಲೆಯು ಚೆಲುವ ಮುಖದೊಳು ಪೊಳೆವೊ ದಂತಗಳಿಂದ || ೧ || ಹೃದಯಮಂದಿರದಲ್ಲಿ ಪದುಮನಾಭನ ಭಜಿಸಿ ಮುದಮನದಲಿ ನಿತ್ಯ ಸದಮಲ ರೂಪತಾಳಿ || ೨ || ದಾತ ಗುರುಜಗನ್ನಾಥವಿಠ್ಠಲನ್ನ ಪ್ರೀತಿಯ ಪಡಿಸುತ ದೂತರ ಪೊರೆಯುತ || ೩ ||
Transliteration
Yeddu baruthare Node, tha eddu baruthare Node ||pa|| Muddu Brindavanada Madyadolaginda Thiddi hachida nama Mudregaloputhive Galadolu Shri Tulasi Nalinakshi Malegalu Cheluva Mukhadolu Poleva Danthagalinda ||1|| Hridaya Sadanadalli Padubhanamana Bhajisi Mudamanadinda Nitya SadaMalaRoopa Thali ||2|| Data Guru Jaganatha Vittalana Prithiya Padisutha Doothara Poreyutha ||3||