Haridasa Sahitya — Vyasadasa

Yatikulamukuta srijayatirtha

ಯತಿಕುಲಮುಕುಟ ಶ್ರೀ

Composer: Haridasa · Deity: Jayateertharu · Genre: Dasara Pada

Kannada lyrics

ಯತಿಕುಲಮುಕುಟ ಶ್ರೀ ಜಯತೀರ್ಥ ಸದ್ಗುಣಗಣ ಭರಿತ ಅತಿಸದ್ಭಕುತಿಲಿ ನುತಿಪಜನರ ಸಂ – ತತ ಪಾಲಿಸುತಲಿ ಪೃಥಿವಿಲಿ ಮೆರೆವ ||pa|| ಶ್ರೀ ಮಧ್ವಮತ ವಾರಿಧಿನಿಜಸೋಮ ಅಗಣಿತಸನ್ಮಹಿಮ ಆಮಹಾಭಕ್ತಾರ್ತಿಹ ನಿಷ್ಕಾಮ ಮುನಿಸಾರ್ವಭೌಮ ರಾಮಪದಾರ್ಚಕ ಈ ಮಹಿಸುರರನು ಪ್ರೇಮದಿ ಪಾಲಿಪ ಕಾಮಿತ ಫಲದ ||1|| ಮಧ್ವಮುನಿಗಳಗ್ರಂಥಕೆ ವ್ಯಾಖ್ಯಾನ ರಚಿಸಿದ ಸುಜ್ಞಾನ ವಿದ್ಯಾರಣ್ಯನ ಸದ್ವಾದÀದಿ ನಿಧನ ಗೈಸಿದಗುಣಪೂರ್ಣ ಅದ್ವೈತಾಟವಿ ದಗ್ಧಕೃತಾನಲ ಸದ್ವೈಷ್ಣವ ಹೃತ್ಪದ್ಮಸುನಿಲಯ ||2|| ಲಲಿತಾ ಮಂಗಳವೇಡಿಪÀ ರಘುನಾಥ ವನಿತಾಸಂಜಾತ ಮಳಖೇಡ ಕಾಗಿನಿ ತೀರನಿವಾಸ ಮಾಡಿಹ ಮೌನೀಶನಲವರದೇಶ ವಿಠಲನ ವಲಿಮೆಯಲಿ ಇಳಿಯೊಳು ಬೋಧಿಪ ಅಲವ ಬೋಧಾಪ್ತ ||3||

Transliteration

Yatikulamukuta srijayatirtha sadgunabarita || pa || Atisadbakutili nutipa janara sam- Tata palisutali pruthivili mereva || a.pa || Srimadhvamatavaridhi nijasoma aganitasanmahima A maha baktartiha nishkama munisarvabauma Ramapadarchaka I mahisuraranu Premadi palipa kamitapalada || 1 || Madhvamunigala gramthake vyakyana racisida suj~jana Vidyaranyana sadvadadi nidhana gaisida sukasadana Advaitatavid…