Haridasa Sahitya — Vyasadasa

Yathivara nimmanu

ಯತಿವರ ನಿಮ್ಮನು

Composer: Haridasa · Deity: Raghavendra Teertharu · Genre: Dasara Pada

Kannada lyrics

ಯತಿವರ ನಿಮ್ಮನು ಸ್ತುತಿಪ ಜನರು ದಿವ್ಯ ಗತಿಯನು ಪೊಂದುವರು ರಾಘವೇಂದ್ರ || ಕ್ಷಿತಿಯೊಳಗೆ ದಶಪ್ರಮತಿಗಳ ಸುಖಕರ ಮತದ ಪರಮ ಸಂಗತಿಗಳ ಹರಡಿದ || ಜಯ ಮುನಿಗಳವರ ಗ್ರಂಥಗಳಿಗೆ ಸುಖಮಯ ಟಿಪ್ಪಣಿಗಳನು ರಚಿಸಿ ಚಿನ್ ಮಯ ರಾಮರ ಸೇವೆಯ ಸಂತಸದಲಿ ಗೈದು ಸುಮಂತ್ರಾಲಯದಲಿ ನೆಲೆಸಿದ || ಮಂಗಳಕರವಾದ ತುಂಗಾನದಿಯ ತರಂಗಗಳಲಿ ಮಿಂದು ನಿಮ್ಮನು ನಿಸ್ಸಂಗರಾದ ಸಾಧು ಸಂಘವ ಪೊರೆಯುವ || ಪರಿಪರಿಯಲಿ ನಿಮ್ಮ ನಮಿಪ ಸೇವಕರಿಗೆ ಸುರಧೇನುವಿನಂತೆ ಸಂತತ ಹರುಷದಿಂದಲಿ ನಿಮ್ಮ ಭಜಿಪ ಸುಜನರಿಗೆ ಸುರತರುವಂತೆ ಪ್ರಸನ್ನರಾಗುವಂಥ ||

Transliteration

Yativara nimmanu stutipa janaru divyagatiyanu ponduvaru raghavendra ||pa|| Kshitiyolage dasapramatigala sukakara Matada parama sangatigala haradida ||a.pa|| Jaya munigalavara granthagalige Sukamaya tippanigalanu rachisi chin Maya ramara seveya santasadali Gaidu sumantralayadali nelesida ||1|| Mangalakaravada tunganadiya Tarangagalali mindu nimmanu Nissangarada sadhu sangava poreyuva ||2|| Paripari…