Haridasa Sahitya — Vyasadasa

Yataravanendusurali jaga

ಯಾತರವನೆಂದುಸುರಲಿ ಜಗ

Composer: Kanakadasaru · Deity: Hari · Genre: Philosophy

Kannada lyrics

ಯಾತರವನೆಂದುಸುರಲಿ ಜಗ ನ್ನಾಥ ಮಾಡಿದ ಒಂದು ನರರೂಪವಯ್ಯ ||ಪ|| ಮುಟ್ಟು ಹುಟ್ಟಿನೊಳು ನೆಟ್ಟನೆ ನಾ ಬಂದೆ ತೊಟ್ಟಿದ್ದೆನಾಗ ತೊಗಲಬಕ್ಕಣ ಇಷ್ಟರೊಳಗೆ ಒಂದು ವಿವರವರಿಯದಿಂಥ ಭ್ರಷ್ಟಗೆ ನನಗಿನ್ಯಾತರ ಕುಲವಯ್ಯ ।।೧।। ಇಂದ್ರಿಯ ಸುತಕ ದುರ್ಗಂಧದ ಮಲಮೂತ್ರ ನಿಂದ ಠಾವಲಿ ತನ್ನ ನಿಜವರಿಯದೆ ಬಂದದ್ದು ಬಚ್ಚಲಗುಣಿ ತಿಂದದ್ದು ಮೊಲೆ ಮಾಂಸ ಇಂಥ ಅಂಧಕಗೆ ನನಗಿನ್ಯಾತರ ಕುಲವಯ್ಯ ।।೩।। ಒಂಬತ್ತು ಎಜ್ಜದೊಳೊಸರುವ ಹೊಲಸದು ತುಂಬಿ ತುಳುಕುವ ಕೊಡವಾಗಿರಲು ಇಂಬಿಲ್ಲದೆ ಹೊಲೆಗೊಂಡ ಠಾವಿನಲಿ ಬಂದಂಥ ಡಂಬಕ ನನಗಿನ್ಯಾತರ ಕುಲವಯ್ಯ ।।೩।। ಕರುಳು ಖಂಡ ನಾರುವ ಚರ್ಮ ರೋಹಿತ ನರಪಂಜರದೀ ಹುರುಳಿಲ್ಲದ ನರದೇಹ ಹೊತ್ತು ತಿರುಗುವಂತ ತಿರುಕ ನನಗಿನ್ಯ…

Transliteration

Yataravanendusurali jaga Nnatha madida omdu nararupavayya ||pa|| Muttu huttinolu nettane na bande Tottiddenaga togalabakkana Ishtarolage ondu vivaravariyadintha Brashtage nanaginyatara kulavayya ||1|| Indriya sutaka durgandhada malamutra Ninda thavali tanna nijavariyade Bandaddu baccalaguni tindaddu mole mamsa intha Andhakage nanaginyatara kulavayya ||2|| Ombattu ejjadolosaruva holasadu Tumbi tulu…