Haridasa Sahitya — Vyasadasa

Yatarava nanayya

ಯಾತರವ ನಾನಯ್ಯ

Composer: Jagannatha Dasaru · Deity: Vishnu · Genre: Philosophy

Kannada lyrics

ಯಾತರವ ನಾನಯ್ಯ ಇಂದಿರೇಶ ಹೋತಾಹ್ವಯನೆ ನಿನ್ನಧೀನವೀ ಜಗವೆಲ್ಲ ।।ಪ॥ ಕಾಲಗುಣಕರ್ಮಸ್ವಭಾವಗಳ ಮನೆಮಾಡಿ ಶ್ರೀ ಲೋಲ ನೀ ಸರ್ವರೊಳಗೆ ಇದ್ದು ಲೀಲೆಗೈಯುತ ಲಿಪ್ತನಾಗದೆ ನಿರಂತರದಿ ಪಾಲಿಸುವೆ ಸಂಹರಿಪೆ ದಿವಿಜದಾನವತತಿಯ ।।೧।। ತಿಳಿಸಿಕೊಂಬುವ ನೀನೆ ಶ್ರುತಿಸ್ಮೃತಿಗಳೊಳಗಿದ್ದು ತಿಳಿಸುವವ ನೀನೆ ಉಪದೇಶಕರೊಳು ತಿಳಿವವನು ನೀನೆ ಬುದ್ಧ್ಯಾದಿಂದ್ರಿಯಗಳೊಳು ನೆಲೆಗೊಂಡು ನಿಖಿಳ ವ್ಯಾಪಾರಗಳ ಮಾಡುತಲಿಪ್ಪೆ ।।೨।। ಜಗದಿ ಜನ್ಮಾದಿಗಳಿಗೆಂತು ಕಾರಣನೆಂದು ನಿಗಮತತಿಗಳು ನಿತ್ಯಸ್ತುತಿಸುತಿಹವು ತ್ರಿಗುಣವರ್ಜಿತ ಜಗನ್ನಾಥವಿಠಲನು ನೀನು ಅಗಣಿತ ಕುಯೋನಿಮುಖದಲಿ ಬಂದವನು ನಾನು ।।೩।।

Transliteration

Yatarava nanayya indiresa Hotahvayane ninnadhinavi jagavella ||pa|| Kalagunakarmasvabavagala manemadi sri Lola ni sarvarolage iddu Lilegaiyuta liptanagade nirantaradi Palisuve samharipe divijadanavatatiya ||1|| Tilisikombuva nine srutismrutigalolagiddu Tilisuvava nine upadesakarolu Tilivavanu nine buddhyadindriyagalolu Nelegondu nikila vyaparagala madutalippe ||2|| Jagadi janmadigaligemtu karanane…