Haridasa Sahitya — Vyasadasa
Yamanelli kaananendu
ಯಮನೆಲ್ಲೋ ಕಾಣೆನೆಂದಹೇಳಬೇಡ
Composer: Purandara Dasaru · Deity: Hari · Genre: Bhakti
Kannada lyrics
ಯಮನೆಲ್ಲೋ ಕಾಣೆನೆಂದಹೇಳಬೇಡ ಯಮನೆ ಶ್ರೀರಾಮನು ಸಂದೇಹ ಬೇಡ ನಂಬಿದ ವಿಭೀಷಣಗೆ ರಾಮನಾದ ನಂಬದಿದ್ದ ರಾವಣಗೆ ಯಮನಾದ ನಂಬಿದ ಅರ್ಜುನನಿಗೆ ಭೃತ್ಯನಾದ ನಂಬದ ದುರ್ಯೋಧನನಿಗೆ ಮೃತ್ಯುವಾದ ನಂಬಿದ ಪ್ರಹ್ಲಾದನಿಗೆ ಹರಿಯಾದ ನಂಬದ ಹಿರಣ್ಯಕನಿಗೆ ಉರಿಯಾದ ನಂಬಿದ ಉಗ್ರಸೇನಗೆ ಮಿತ್ರನಾದ ನಂಬದಿದ್ದ ಕಂಸನಿಗೆ ಶತ್ರುವಾದ ನಂಬಿಕೊಳ್ಳಿ ಬೇಗ ಶ್ರೀಕೃಷ್ಣದೇವನ ಕಂಬು ಚಕ್ರಧಾರಿ ಪುರಂದರವಿಠಲನ
Transliteration
Yamanelli kaananendu hela bedaa Yamane Sri Raamanu Sandheha Bedaa|| Nambida Vibeeshanage Raamanaada Nambadidda Raavanage Yamanaada|| Nambida Arjunage Mithranaada Nambadidda Dhuryodhanage Sathruvaada|| Nambida Prahlaadhanige Hariyaada Nambadidda Hiranyage Ariyaada|| Nambida Ugrasenage Brudhyanaada Nambadidda Kamsanige Shathruvaada|| Nambi Kolli Bega Sri Krishna Devana Kambu Chakradhaari Sri Purandh…