Haridasa Sahitya — Vyasadasa

Yamana sasana kelo jiva

ಯಮನ ಶಾಸನ ಕೇಳೊ ಜೀವ

Composer: Purandara Dasaru · Deity: Hari · Genre: Philosophy

Kannada lyrics

ಯಮನ ಶಾಸನ ಕೇಳೊ ಜೀವ ಇದು ಸಂಶಯವಿಲ್ಲೆಂದು ಎಣಿಸು ಸ್ವಭಾವ ||ಪ|| ಪರ ಸತಿಯರ ನೋಡಿದವಗೆ ಪತ್ತು ಕೊರಡು ಕೆಂಪಗೆ ಕಾಸಿ ಕುಕ್ಕಿ ಕಣ್ಣೊಳಗೆ ಎರಡು ಗುಡ್ಡನು ಪೀಕೋರವಗೆ ಸೀಸವ ಕರಗಿಸಿ ಪೊಯ್ಯುವರೊ ಅವನ ಕಿವಿಯೊಳಗೆ || ಅನ್ಯಸ್ತ್ರೀಪುರುಷರ ಸಂಗ ತನ್ನವರ ಕುಲ ಅಳಿಸಿಟ್ಟು ಹಾಕುವರಂಗ ನರಕಕ್ಕೆ ಗುರಿ ಮಾಡಿ ತುಂಗ ಕೆಂಡ ಉರಿವ ಉಕ್ಕಿನ ಕಂಭ ಕಟ್ಟಿಪ್ಪ ಭಂಗ || ಪರಸತಿ ಮೆರೆವೋದು ಕಂಡು ಗಾಣ ಒರಳೊಳಗಾಡಿಸಿ ಒಣಗಿಸಿ ಬೆಂಡು ಉರಿ ತೈಲದೊಳಗೆ ಹಾಕಿ ಗುಂಡು, ಕರಿದ ತೆರನಾಗಿ ಹಂದಿಯ ತಿನಿಸುವ ಖಂಡು || ಅನ್ಯ ಸ್ತ್ರೀ ವಿಚಾರ ಮೋಹವಿಟ್ಟಿಹ ಘನ್ನಘಾತಕಗೆ ಗಳರಂತೆನೀಹ ಬೆನ್ನ ಚರ್ಮವ ಕಿತ್ತಿ ದೇಹ ಕುಟ್ಟಿ ಘೋರಿಸಿ ಬಾಧಿಸಿ ಕಾಡಲಿಕ್ಕೆ ಬಹ…

Transliteration

Yamana sasana kelo jiva idu Samsayavillendu enisu svabava ||pa|| Para satiyara nodidavage pattu Koradu kempage kasi kukki kannolage Eradu guddanu pikoravage sisava Karagisi poyyuvaro avana kiviyolage || Anyastripurushara sanga Tannavara kula alisittu hakuvaranga Narakakke guri madi tunga Kenda uriva ukkina kamba kattippa Banga || Parasati merevodu kandu gana Oralolagadisi onagisi bendu Uri tailado…