Haridasa Sahitya — Vyasadasa
Yama tanna puradi saridanu
ಯಮ ತನ್ನ ಪುರದಿ ಸಾರಿದನು,
Composer: Purandara Dasaru · Deity: Hari · Genre: Philosophy
Kannada lyrics
ಯಮ ತನ್ನ ಪುರದಿ ಸಾರಿದನು, ನಮ್ಮ ಕಮಲನಾಭನ ದಾಸರನು ಮುಟ್ಟದಿರೆಂದು ||ಪ|| ಭುಜದಲೊಪ್ಪುವ ಶಂಖ ಚಕ್ರ ಮುದ್ರಾಂಕಿತ ನಿಜ ದ್ವಾದಶ ನಾಮ ಧರಿಸಿಪ್ಪರ ತ್ರಿಜಗ ವಂದಿತ ತುಳಸಿಯ ಮಾಲೆ ಧರಿಸಿದ ಸುಜನರುಗಳ ಕೆಣಕದೆ ಬನ್ನಿರೊ ಎಂದು || ಬೇವ್ಮಡಿಯನುಟ್ಟು ಬೆನ್ನು ಸಿಡಿಯನೇರಿ ಚಿಮ್ಮುತ ಓಲಿ ಬೊಬ್ಬೆಗಳಿಡುತ ಕರ್ಮಕ್ಕೆ ಗುರಿಯಾಗಿ ಪ್ರಾಣಿಹಿಂಸೆಯ ಮಾಳ್ಪ ಬ್ರಹ್ಮತ್ಯಕಾರರ ಎಳೆದು ತನ್ನಿರೋ ಎಂದು || ತಾಳದಂಡಿಗೆ ನೃತ್ಯಗೀತ ಸಮ್ಮೇಳದಿ ಊಳಿಗವನು ಮಾಳ್ಪ ಹರಿದಾಸರ ಕೇಳುತ್ತಲೇ ಕರವೆತ್ತಿ ಮುಗಿದು ಯಮ- ನಾಳುಗಳೆಂದು ಹೇಳದೆ ಬನ್ನಿರೊ ಎಂದು || ಗುರು ನಿಂದಕರ ಹಿರಿಯರ ದೂಷಿಸುವರ ಪರಧನಗಳನಪಹರಿಸುವರ ಅರವಾಣಿಕಾರರ ಉರುಳಿಸಿ ಬಾಯೊಳು ಅರಗನ…
Transliteration
Yama tanna puradi saridanu, namma Kamalanabana dasaranu muttadirendu ||pa|| Bujadaloppuva sanka cakra mudrankita Nija dvadasa nama dharisippara Trijaga vandita tulasiya male dharisida Sujanarugala kenakade banniro endu || Bevmadiyanuttu bennu sidiyaneri Cimmuta Oli bobbegaliduta Karmakke guriyagi pranihimseya malpa Brahmatyakarara eledu tanniro emdu || Taladandige nrutyagita sammeladi Uligavanu ma…