Haridasa Sahitya — Vyasadasa
Yakke intha duduku
ಯಾಕೆ ಇಂಥ ದುಡುಕು
Composer: Sripadarajaru · Deity: Krishna · Genre: Dasara Pada
Kannada lyrics
ಯಾಕೆ ಇಂಥ ದುಡುಕು ಕೃಷ್ಣಯ್ಯ ನಿನ- ಗೇಕೆ ಇಂಥ ದುಡುಕು ಪಾಕಶಾಸನ ವಂದ್ಯ ಪೋಕತನಗಳಿನ್ನು ಸಾಕುಸಾಕಯ್ಯ ಕೃಷ್ಣ ||ಪ|| ಗೊಲ್ಲ ಬಾಲಕರು ನೀವೆಲ್ಲರು ಕೂಡಿಕೊಂಡು ಗುಲ್ಲು ಮಾಡದೆ ಮೊಸರೆಲ್ಲ ಸವಿದೆಯಂತೆ ಕೃಷ್ಣ ||೧|| ಪೂತನಿ ಮೊಲೆಯನ್ನು ಭೀತಿಯಿಲ್ಲದೆ ಉಂಡು ಘಾತವ ಮಾಡಿದೆ ಮಾತನಾಡಯ್ಯ ಕೃಷ್ಣ ||೨|| ದುಷ್ಟ ಕಂಸನ ನೀನು ಕಷ್ಟವಿಲ್ಲದೆ ಮಡುಹಿ ಮುಷ್ಟಿಕನ ಕೊಂದೆ ದೃಷ್ಟಿ ತಾಕೀತೆಂದು ||೩|| ನಿರ್ಜನ ಸ್ಥಳದಿ ಯಮಳಾರ್ಜುನರನ್ನು ಮಡುಹಿ ದುರ್ಜನರ ಕೊಂದೆ ಅರ್ಜುನ ಸಾರಥಿ ||೪|| ಅಂಗಿ ಟೊಪ್ಪಿಗೆ ಉಂಗುರ ಉಡಿದಾರ ಶೃಂಗರಿಸಿಕೊಂಡು ರಂಗವಿಠಲ ಬಾರೋ ||೫|||
Transliteration
Yaake intha duduku krushnayya | ninageke intha duduku || pa || Paakashaasana vandya pokatanagalinnu saaku saakayya krushna || a. Pa. || Golla baalakaru neevellaru koodikondu | gullu maadade mosarella savidante krushna || 1 || Pootani moleyannu bheetiyillade undu | ghaatava maadide maatanaadayya krushna || 2 || Dushta kamsana neenu kashtavillade maduhi | mushtikana komde drushthi taakitandu || 3 ||…