Haridasa Sahitya — Vyasadasa

Yake nirdayanade

ಯಾಕೆ ನಿರ್ದಯನಾದೆ

Composer: Purandara Dasaru · Deity: Hari · Genre: Philosophy

Kannada lyrics

ಯಾಕೆ ನಿರ್ದಯನಾದೆ ಎಲೊ ದೇವನೆ ಶ್ರೀಕಾಂತ ಎನ್ನ ಮೇಲೆ ಎಳ್ಳಷ್ಟು ದಯವಿಲ್ಲ ||ಪ|| ಕಂಗೆಟ್ಟು ಕಂಭದಲಿ ಒಡೆದು ಬಳಲಿ ಬಂದು ಹಿಂಗದೆ ಪ್ರಹ್ಲಾದನ ಅಪ್ಪಿಕೊಂಡೆ ಮಂಗಳಪದವಿತ್ತು ಮನ್ನಿಸಿದೆ ಅವ ನಿನಗೆ ಭಂಗಾರವೆಷ್ಟು ಕೊಟ್ಟನು ಪೇಳೊ ಹರಿಯೆ ||೧|| ಸಿರಿ ದೇವಿಗೆ ಹೇಳದೆ ಸೆರಗು ಸಂವರಿಸದೆ ಗರುಡನ ಮೇಲೆ ಎರಗಿ ಗಮನವಾಗದೆ ಭರದಿಂದ ನೀ ಬಂದು ಆತನ ಸಲಹಿದೆ ಕರಿರಾಜ ಎಷ್ಟು ಕನಕವ ಕೊಟ್ಟನೋ ಹರಿಯೆ ||೨|| ಅಜಮಿಳನು ಅಣ್ಣನೆ ವಿಭೀಷಣನು ತಮ್ಮನೇ ನಿಜದಿ ರುಕ್ಮಾಂಗದನು ನಿನ್ನ ಮೊಮ್ಮಗನೆ ಭಜನೆಗೆ ಅವರೇ ಹಿತರೆ ನಾ ನಿನಗೆ ಅನ್ಯನೇ ತ್ರಿಜಗಪತಿ ಸಲಹೆನ್ನ ಪುರಂದರವಿಠಲ ||೩||

Transliteration

Yake nirdayanade elo devane Srikanta enna mele ellashtu dayavilla ||pa|| Kangettu kambadali odedu balali bandu Hingade prahladana appikonde Mangalapadavittu manniside ava ninage Bangaraveshtu kottanu pelo hariye ||1|| Siri devige helade seragu samvarisade Garudana mele eragi gamanavagade Baradinda ni bamdu Atana salahide Kariraja eshtu kanakava kottano hariye ||2|| Ajamilanu annane vibishananu tam…