Haridasa Sahitya — Vyasadasa

Yake bandeyo ele jiva

ಯಾಕೆ ಬಂದೆಯೊ ಎಲೆ ಜೀವ

Composer: Vijaya Dasaru · Deity: Hari · Genre: Bhakti

Kannada lyrics

ಯಾಕೆ ಬಂದೆಯೊ ಎಲೆ ಜೀವ ನೀ- ।।ಪ॥ ನ್ಯಾಕೆ ಬಂದೆಯೋ ಎಲೆ ಜೀವ ಈ ಲೋಕದ ಅನುಭವ ಬೇಕಾಯ್ತೆ ನಿನಗೆ ।।ಅ.ಪ॥ ಮೇರು ಪರ್ವತದಲ್ಲಿ ವಾರಣವಂತನಾಗಿ ಮಾರಮಣನ ಪಾದ ಭಜನೆಯ ಬಿಟ್ಟು ನೀ ।।೧।। ಹೊನ್ನು ಹೆಣ್ಣ ಮಣ್ಣು ಮೂರು ತನ್ನದಾದೀತೆಂದು ಬಣ್ಣ ಸುಖವ ನಂಬಿ ಬಂದೆಯಾ ಜೀವ ।।೨।। ಆದದ್ದೆಲ್ಲಾಯಿತು ಹೋದ ಮಾತುಗಳ್ಯಾಕೆ ಶ್ರೀದ ವಿಜಯವಿಠಲನ ನೆನೆಕಂಡ್ಯ ಮನವೇ ।।೩।।

Transliteration

Yake bandeyo ele jiva ni- ||pa|| Nyake bandeyo ele jiva I Lokada anubava bekayte ninage ||a.pa|| Meru parvatadalli varanavantanagi Maramanana pada Bajaneya bittu ni ||1|| Honnu henna mannu muru tannadaditendu Banna sukava nambi bandeya jiva ||2|| Adaddellayitu hoda matugalyake Srida vijayavithalana nenekandya manave ||3||