Haridasa Sahitya — Vyasadasa
Yadavaraya brundavanadolu
ಯಾದವರಾಯ ಬೃಂದಾವನದೊಳು
Composer: Kanakadasaru · Deity: Krishna / Govinda / Mukunda · Genre: Bhakti
Kannada lyrics
ಯಾದವರಾಯ ಬೃಂದಾವನದೊಳು ವೇಣು ನಾದವ ಮಾಡುತಿರೆ ||ಪ|| ರಾಧಾ ಮುಂತಾದ ಗೋಪಿಯರೆಲ್ಲ ಮಧುಸೂದನ ನಿನ್ನನು ಸೇವಿಸುತಿರೆ ಸುರರು ಅಂಬರದಿ ಸಂದಣಿಸಿರೆ ಅಪ್ಸರ ಸ್ತ್ರೀಯರು ಮೈ ಮರೆತಿರೇ||ಅ.ಪ|| ಕರದಲಿ ಕೊಳಲನು ಊದುತ ಪಾಡುತ ಸ ರಿ ಗ ಮ ಪ ದ ನಿ ಸ್ವರಗಳ ನುಡಿಸುತ ಹರಿ ಹರ ಬ್ರಹ್ಮರು ನಲಿದಾಡುತಿರೆ ತುಂಬುರು ನಾರದರು ಪಾಡುತಿರೆ||1|| ಅರವಿಂದ ದಳ ನಯನ ಕರುಗಳ ಸಹಿತಲೇ ಗೋಕುಲವೆಲ್ಲ ಸಿರಿ ಕಾಗಿನೆಲೆಯಾದಿ ಕೇಶವ ರಾಯ ತರುಗಳ ಸಹಿತಲೇ ವರಗೋಪಾಲ||2||
Transliteration
Yadavaraya brundavanadolu Venu nadava madutire ||pa|| Radha muntada gopiyarella Madhusudana ninnanu sevisutire Suraru ambaradi sandanisire Apsara striyaru mai maretire anupallavi ||1|| Karadali kolalanu Uduta paduta Sa ri ga ma pa da ni svaragala nudisuta Hari hara brahmaru nalidadutire Tumburu naradaru padutirecarana ||2|| Karugala sahitale gokulavella Siri kagineleyadi kesava raya Tarugala sahit…