Haridasa Sahitya — Vyasadasa
Yadava ne baa
ಯಾದವ ನೀ ಬಾ
Composer: Purandara Dasaru · Deity: Krishna / Govinda / Mukunda · Genre: Bhakti
Kannada lyrics
ಯಾದವ ನೀ ಬಾ ಯದುಕುಲನಂದನ ಮಾಧವ ಮಧುಸೂಧನ ಬಾರೋ ।।ಪ॥ ಸೋದರ ಮಾವನ ಮಧುರೆಲಿ ಮಡುಹಿದ ಯಶೋದೆ ಕಂದ ನೀ ಬಾರೋ ।।ಅ.ಪ।। ಶಂಖಚಕ್ರವು ಕೈಯಲಿ ಹೊಳೆಯುತ ಬಿಂಕದ ಗೋವಳ ನೀ ಬಾರೋ ಅಕಳಂಕ ಮಹಿಮನೆ ಆದಿನಾರಾಯಣ ಬೇಕೆಂಬ ಭಕುತರಿಗೊಲಿಬಾರೋ ।।೧।। ಕಣಕಾಲಂದುಗೆ ಘಲುಘಲುರೆನುತಲಿ ಝಣಝಣ ವೇಣುನಾದದಲಿ ಚಿಣಿಕೋಲು ಚೆಂಡು ಬುಗುರಿಯನಾಡುತ ಸಣ್ಣ ಸಣ್ಣ ಗೋವಳರೊಡಗೂಡಿ ಬಾರೋ ।।೨।। ಖಗವಾಹನನೇ ಬಗೆಬಗೆ ರೂಪನೇ ನಗುಮೊಗದರಸನೇ ನೀ ಬಾರೋ ಜಗದೊಳು ನಿನ್ನಯ ಮಹಿಮೆಯ ಪೊಗಳುವೆ ಪುರಂದರವಿಠಲ ನೀ ಬಾರೋ ।।೩।।
Transliteration
Yadava ni ba yadukula nandana madhava madhusudana baro Sodara mavana madhureli maduhida yashode kandane ni baro Shankha chakravu kayyali holeyuta binkada govala ni baro akalanka mahimane Adi narayana bekemba bhaktarigoli baro||1|| Kanakaladuge gejje ghulu ghulurenutali jhana jhana venu nadadali cinikola cendu bugariyanaduta sanna sanna govalarodagudi||2|| Khaga vahanane bage bage rupane nagumogada…