Haridasa Sahitya — Vyasadasa

Yachakaru parara sankata

ಯಾಚಕರು ಪರರ ಸಂಕಟ

Composer: Vijaya Dasaru · Deity: Hari · Genre: Bhakti

Kannada lyrics

ಯಾಚಕರು ಪರರ ಸಂಕಟ ಬಲ್ಲರೆ ।।ಪ।। ಭೂಚಕ್ರದೊಳು ಗಾಳಿಯಂತೆ ತಿರುಗಲು ಬಿಡರು ।।ಅ.ಪ।। ಕೌಪೀನವನೆ ಧರಿಸಿ ಮುಖವ ಡೊಂಕನೆ ಮಾಡಿ ಕೋಪದಿಂದಲಿ ಕರವೆತ್ತಲ್ಯಾಕೋ ವಾಪಿ ಕೂಪವ ಮೀರಿ ಸಮುದ್ರ ದಾಟಿ ತಾ ರೂಪಾಂತರವ ತಾಳಿ ಮನೆ ಮನೆ ಪೊಕ್ಕರು ಬಿಡರು ।।೧।। ವಿಷವ ಸವಿದುಂಡು ಮಹಾಮಡುವ ಪ್ರವೇಶಿಸಿ ವಸುಧೆಯೊಳು ತಿರಿಕೆಬೇಡಿ ತಿಂದರು ಬೆಸನೆ ವನವನ ತಿರುಗಿ ಅಜ್ಞಾತವಾಗಿ ಮಾ- ನಸದಲ್ಲಿ ಇದ್ದುಗ್ರಕರ್ಮಮಾಡಲು ಬಿಡರು ।।೨।। ಜುಟ್ಟು ಜನಿವಾರ ಕಿತ್ತುಕೊಂಡು ಯತಿಯಾಗಿ ಕಟ್ಟಕಡೆಯಲಿ ಗೃಹಸ್ಥಧರ್ಮ ತೊರೆದು ಹುಟ್ಟುಗತಿಯಿಲ್ಲೆನುತ ಕೃಷ್ಣ ಕೃಷ್ಣಾ ವಿಜಯ ವಿಠಲನ ಪಾದಕ್ಕೆ ಮೊರೆಯಿಟ್ಟರೂ ಬಿಡರು ।।೩।।

Transliteration

Yachakaru parara sankata ballare ||pa|| Bucakradolu galiyante tirugalu bidaru ||a.pa|| Kaupinavane dharisi mukava Donkane madi Kopadindali karavettalyako Vapi kupava miri samudra dati ta Rupantarava tali mane mane pokkaru bidaru ||1|| Vishava savidundu mahamaduva pravesisi Vasudheyolu tirikebedi tindaru Besane vanavana tirugi aj~jatavagi ma- Nasadalli iddugrakarmamadalu bidaru ||2|| Juttu janivara…