Haridasa Sahitya — Vyasadasa

Yaake mukanadhyo

ಯಾಕೆ ಮೂಕನಾದ್ಯೋ

Composer: Jagannatha Dasaru · Deity: Raghavendra Teertharu · Genre: Dasara Pada

Kannada lyrics

ಯಾಕೆ ಮೂಕನಾದ್ಯೋ – ಗುರುವೇ ನೀ ನ್ಯಾಕೆ ಮೂಕನಾದ್ಯೋ ? || ಪ || ಯಾಕೆ ಮೂಕನಾದ್ಯೋ ಲೋಕಪಾಲಕ ಎನ್ನ ಸಾಕುವರ್ಯಾರಯ್ಯ ಶ್ರೀಕರ ರಾಘವೇಂದ್ರ || ಅ || ಹಿಂದಕ್ಕೆ ನೀ ಎನ್ನ ಮುಂದೆ ಸುಳೀದೀಗ ಮಂದಿಯೆಂದದಿ ಎನ್ನ ಮಂದನ್ನ ಮಾಡೀಗ || ೧ || ಬೇಕಾಗದಿದ್ದರೆ ಯಾಕೆ ಕೈಪಿಡಿದಿ ಕಾಕುಜನರೊಳೆನ್ನ ನೂಕಿಬಿಟ್ಟು ಈಗ || ೨ || ನಿನ್ನಂಥ ಕರುಣಿಲ್ಲ ಎನ್ನಂಥ ಕೃಪಣಿಲ್ಲ ಘನ್ನಮಹಿಮನೆ ನೀ ಎನ್ನ ಬಿಟ್ಟು ಈಗ || ೩ || ಎಂದಿಗಾದರು ನಿನ್ನ ಪೊಂದಿಕೊಂಡವನಲ್ಲೆ ಇಂದು ನೀ ಬಿಟ್ಟರೆನ್ನ ಮುಂದೆ ಕಾಯುವರ್ಯಾರೋ || ೪ || ಜನ್ಯನು ನಾನೀಗ ಎನ್ನ ಜನಕನು ನೀನು ಮನ್ನಿಸು ನೀ ನಿತ್ಯ ನನ್ಯಶರಣನಲ್ಲೆ || ೫ || ಈಗ ಪಾಲಿಸದಿರೆ ಯೋಗಿ ಕುಲವರ್ಯ ರಾಘವೇಂದ್…

Transliteration

Yake mukanadyo guruve ni yake mukanadyo | Yake mukanade lokapalaka enna | Sakuvaryarayya srikara ragavendra || Hindakke ni enna mumde sulidadidi | Mamdiyolage enna mandanna madidyallo || 1 || Bekagadiddarinyake kaiyanu pidide | Kakujanarolenna nukibittu ninu (/ni) || 2 || Iga palisadire yogikulavarya | Ragavendrane Bava saguvad~hyangayya || 3 || Ninnantha karuniyilla ennantha krupaniyilla | Gannam…