Haridasa Sahitya — Vyasadasa

Yaake daya baradho

ಯಾಕೆ ದಯಬಾರದೊ ಕಾಂತೇಶ

Composer: Ambabai · Deity: Mukhyaprana / Vaayu / Hanuma / Bheema · Genre: Dasara Pada

Kannada lyrics

ಯಾಕೆ ದಯಬಾರದೊ ಕಾಂತೇಶ ಪ್ರಾಣೇಶ ಸಾಕಲಾರದೆ ಪೋದೆಯಾ ಎನ್ನನು ||pa|| ಏಕಚಿತ್ತದಿ ನಿನ್ನ ಚರಣ ನಂಬಿ ಬರಲು ನೂಕುವುದುಚಿತವೇ ಶ್ರೀ ಭಾರತೀಶ ||a.pa|| ತೊಳಲಿ ಬಳಲಿ ಸುಖ ಸುಳಿವೆಂಬೋದರಿಯದೆ ನಳಿನಾಕ್ಷನ ದಾಸ ನಿನ್ನ ಕೀರ್ತಿ ಇಳೆಯೆಲ್ಲ ಪೊಗಳಲು ಸಲಹುವನೆಂತೆಂದು ಬಳಿಗೆ ಬರಲು ಮನಕರಗದೆ ತಂದೆ ||1|| ಅಂದು ಕನಸಿನಲ್ಲಿ ಶಿರದಲ್ಲಿ ಕರವಿಟ್ಟೆ ಇಂದೆಲ್ಲಿ ಪೋಯಿತೊ ಆ ಕರುಣ ತಂದೆ ಮುದ್ದುಮೋಹನ ಗುರುಗಳ ವಚನವ ತಂದಾದರೂ ಇಂದು ಒಲಿದೆನ್ನ ಕಾಯೊ||2|| ವಿೂಸಲ ದಾಸ್ಯಕೆ ಆಶೆ ಮಾಡಿದೆನೆಂದು ದೋಷವೆಣಿಸುವರೆ ಎನ್ನಲಿ ನೀ ಶೇಷಶಯನನೆ ಬಲ್ಲೆನೊ ಇದರ ಮರ್ಮ ಘಾಸಿಗೊಳಿಸದೆ ನೀ ಅಭಯವನೀಯೊ ||3|| ರಾಮದಾಸ್ಯವ ಬಯಸಿ ನೇಮದಿಂದಲಿ ಇದ್ದು ರಾಮ…

Transliteration

Yake dayabarado kantesa pranesasakalarade podeya ennanu ||pa.|| Ekacittadi ninna charana nambi baralu Baratisa ||a.pa.|| Tolali balali suka sulivembodariyade Nalinakshana dasa ninna kirti Ileyella pogalalu salahuvanentendu Balige baralu manakaragade tande ||1|| Andu kanasinalli Siradalli karavitte Indelli poyito A karuna Tamnde muddumohana gurugala vacanava Indu olidenna kayo||2|| Visala dasyake a…