Haridasa Sahitya — Vyasadasa
Vyasarayara suladhi
ಧ್ರುವತಾಳ
Composer: Vijaya Dasaru · Deity: Vyasarayaru · Genre: Sulaadi
Kannada lyrics
ಧ್ರುವತಾಳ ಬಂದು ದಿವಸ ನಾರಂದ ಮುನೀಶ್ವರ ನಂದ ಗೋಪನ ಕಂದ ಇಂದಿರಾರಮಣನ ಸಂದರುಶನ ಮಾಡಿ ಬಂದ ಹರಿವರ್ಷ ವೆಂದೆಂಬೊ ಖಂಡದೊಳಾನಂದ ಗಾಯನದಿಂದ ನಿಂದು ನರ ಮೃಗಗೆ ವಂದಿಸಿ ತೆರಳುತಿರೆ ಅಂದು ಪ್ರಹ್ಲಾದನು ದ್ವಂದ್ವ ಪಾದಕೆರಗಿ ಇಂದು ದ್ವಾರಕೆ ಪುರದಿಂದ ಪೊರಟು ನಡೆ ತಂದ ವಾರ್ತೆ ಎನಗೊಂದುಸರಲಿಲ್ಲ ದೀನ ಬಂಧು ಎನಿಸಿ ಕೊಂಬ ವೃಂದಾರಕ ಮುನಿ ಮುಂದುಗಾಣದಲೆ ಕಣ್ಣಿಂದ ಬಾಷ್ಪೋದಕ ಬಿಂದುಗಳುದರಿಸುತ ನಂದನಂದನ ಚರಿತೆ ಒಂದೊಂದು ಪೇಳಲದರಿಂದ ಮೈಮರೆದು ಹೋ ಎಂದು ಶಿರವದೂಗಿ ಮುನಿಗೆ ಎರಗಿ ಕಂಧರ ಬಾಗಿ ನಾನೆಂದಿಗೆ ಕೃಷ್ಣನ ವಂದಿಸುವೆನೆನಲು ಮಂದಹಾಸದಿಂದ ಮಂದರೋದ್ಧರ ವಿಜಯವಿಠ್ಠಲ ಯಶೋದೆ ಕಂದನ ಲೀಲೆಯಾನಂದ ಪೇಳೆನ್ನ ಮುನಿ ಅಂದು ವಿವರಿಸಿದ…
Transliteration
Dhruva tala bAndu divasa narada munisvara Nandagopana kanda indiraramanana Sandarusana madi bandha hari varsha Vendembo kandadolananda gayanadinda Nindu nara mrugage vandisi teralutire Andu pralhadanu dvandva padakkeragi Indu dvarakapuradinda poratu nade- Tanda varte enagondusaralilla dina Bandhu enisikomba vrundaraka muni Munduganadale kanninda bashpodaka Bindugaludarisuta nanda nandana charite O…