Haridasa Sahitya — Vyasadasa

Vyasarayara smarisiro

ವ್ಯಾಸರಾಯರ ಸ್ಮರಿಸಿರೋ

Composer: Vijaya Dasaru · Deity: Vyasarayaru · Genre: Bhakti

Kannada lyrics

ವ್ಯಾಸರಾಯರ ಸ್ಮರಿಸಿರೋ ವ್ಯಾಸರಾಯರ ಸ್ಮರಿಸಿ ಏಸು ಜನ್ಮದ ಪಾಪ ನಾಶವಾಗುವುದು ನಿಮ್ಮಾಶೆ ಸಿದ್ಧಿಸುವುದು ಲೇಸಾಗಿ ಸುಖಿಸಿ ಆನಂದ ವೈಕುಂಠದಲಿ ವಾಸವಾಗುವುದು ನಿಜ ಭಕುತಿಯಲಿ ಬಿಡದೆ ||pa|| ಪಿತನಿಂದ ನೊಂದು ರತಿಪಿತನ ಸ್ಮರಿಸುತ ಪ್ರತಿಬಂಧಕಗಳ ಪ್ರತಿಯಾಗಿ ಬಂದಿರಲು ಅತಿವೇಗದಿಂದ ಪಾರಂಗತನಾಗಿ ಬಲು ಮತಿವಂತನಾಗಿ ಮುದದೀ ಕ್ಷಿತಿಯ ಭಾರವ ವೊಹಿಸಿ ಕೃತಭುಜ ಮುನೀಶ್ವರನ ಸ್ತುತಿಸುತಲ್ಲಿದ್ದು ಮಿತಿಕಾಲ ಹಿಂಗಳದು ಸುತಗೆ ರಾಜ್ಯವನಿತ್ತು ಕೃತಕಾರ್ಯನಾಗಿ ಅಚ್ಯುತನ ವರದಿಂದ ಬಂದು ||1|| ಅಲ್ಲಿ ತ್ರಿಣಿನೇತ್ರ ಶ್ರೀ ವಲ್ಲಭನ ಶ್ರೀಪಾದ ಪಲ್ಲವಾರುಣಿ ಚಿತ್ತದಲ್ಲಿ ಪ್ರತಿದಿವಸದಲಿ ನಿಲ್ಲಿಸಿ ನಿಗಮಾರ್ಥದಿಂದ ಪೂಜಿಸುತ್ತಿದ್ದ ಬಲ್ಲ…

Transliteration

pitaninda nondu ratipitana smarisuta pratibandhakagaLa pratiyAgi bandiralu ativEgadinda pArangatanAgi balu mativantanAgi mudadI kShitiya BArava vohisi kRutaBuja munISvarana stutisutalliddu mitikAla hingaLadu sutage rAjyavanittu kRutakAryanAgi acyutana varadinda baMdu ||1|| alli triNinEtra SrI vallaBana SrIpAda pallavAruNi cittadalli pratidivasadali nillisi nigamArthadinda pUjisuttidda balla Bakuti…