Haridasa Sahitya — Vyasadasa

Vyasarayara charanakamala darusanavenage(Suladi by Purandara dasaru)

ಧ್ರುವತಾಳ

Composer: Purandara Dasaru · Deity: Vyasarayaru · Genre: Sulaadi

Kannada lyrics

ಧ್ರುವತಾಳ ವ್ಯಾಸರಾಯರ ಚರಣ ಕಮಲ ದರ್ಶನವೆನ- ಗೇಸು ಜನ್ಮದ ಸುಕೃತ ಫಲದಿ ದೊರಕಿತೊ, ಎನ್ನ ಸಾಸಿರ ಕುಲಕೋಟಿ ಪಾವನವಾಯಿತು- ಶ್ರೀಶನ ಭಜಿಸುವುದಕಧಿಕಾರಿ ನಾನಾದೆ ದೋಷರಹಿತನಾದ ಪುರಂದರವಿಠಲನ ದಾಸರ ಕರುಣವು ಎನ್ನ ಮೇಲೆ ಇರಲಾಗಿ ||1|| ಮಟ್ಟತಾಳ ಗುರು ಉಪದೇಶವಿಲ್ಲದ ಜ್ಞಾನವು ಗುರು ಉಪದೇಶÀವಿಲ್ಲದ ಸ್ನಾನವು ಗುರು ಉಪದೇಶವಿಲ್ಲದ ಧ್ಯಾನವು ಗುರು ಉಪದೇಶವಿಲ್ಲದ ಜಪವು ಗುರು ಉಪದೇಶವಿಲ್ಲದ ತಪವು ಗುರು ಉಪದೇಶವಿಲ್ಲದ ಮಂತ್ರ ಗುರು ಉಪದೇಶವಿಲ್ಲದ ತಂತ್ರ ಉರಗನ ಉಪವಾಸದಂತೆ ಕಾಣಿರೋ, ಗುರು ವ್ಯಾಸರಾಯರೆ ಕರುಣದಿಂದಲಿ ಎನಗೆ ಪುರಂದರ ವಿಠಲನೇ ಪರನೆಂದರುಹಿ ದುರಿತಭಯವನೆಲ್ಲ ಪರಿಹರಿಸಿದರಾಗಿ ವರ ಮಹಾಮಂತ್ರ ಉಪದೇಶಿಸಿದರಾಗಿ ||2||…

Transliteration

dhruvatALa vyAsarAyara caraNa kamala darSanavena- gEsu janmada sukRuta Paladi dorakito, enna sAsira kulakOTi pAvanavAyitu- SrISana BajisuvudakadhikAri nAnAde dOSharahitanAda purandaraviThalana dAsara karuNavu enna mEle iralAgi ||1|| maTTatALa guru upadESavillada j~jAnavu guru upadESaÀvillada snAnavu guru upadESavillada dhyAnavu guru upadESavillada japavu guru upadESavillada tapavu guru upadESavill…