Haridasa Sahitya — Vyasadasa
Vyasarayara besarade nene
ವ್ಯಾಸರಾಯರ ಬೇಸರದೇ ನೆನೆ
Composer: Pranesha Dasaru · Deity: Vyasarayaru · Genre: Dasara Pada
Kannada lyrics
ವ್ಯಾಸರಾಯರ ಬೇಸರದೇ ನೆನೆ |ದಾಸೆ ಪೂರ್ತಿಸಿಕೊಂಬೆ ನಾಂ ||pa|| ದಾಸರಾಯರಿಗಾಸು ಮಂತ್ರೋಪದೇಶ ಕರುಣದಿ ಮಾಡಿದ || ದೇಶದೊಳಗೆ ವಿಶೇಷ ಮೆರೆದು ಅಶೇಷ ಜನರುದ್ಧರಿಸಿದ ||1|| ವಾಸುದೇವನ ದ್ವೇಷಿಗಳ ಅನಾಯಾಸದಿಂ ನೀ ಕರಿಸಿದ || ದಾಸ ವರ್ಗವ ಪೋಷಿಸಲು ನಿರ್ದೋಷ ಗ್ರಂಥ ವಿರಚಿಸಿದ ||2|| ಭಾಸುರ ಚರಿತ ಭೇಶ ಭಾಸ ಸುಕಾಷಾಯಾಂಬರ ಧರಿಸಿದ || ವೀಶವಾಹನ ಕ್ಲೇಶಹ ಪ್ರಾಣೇಶ ವಿಠ್ಠಲನೊಲಿಸಿದ ||3||
Transliteration
vyAsarAyara bEsaradE nene |dAse pUrtisikoMbe nAM ||pa|| dAsarAyarigAsu mantrOpa |dESa karuNadi mADida || dESadoLage viSESha meredu a |SESha janaruddharisida ||1|| vAsudEvana dvEShigaLa anA |yAsadiM nI karisida || dAsa vargava pOShisalu ni |rdOSha grantha viracisida ||2|| BAsura carita BESa BAsa su |kAShAyAMbara dharisida || vISavAhana klESaha prA |NESa viThThalanolisida ||3||