Haridasa Sahitya — Vyasadasa
Srihariseve sulaadhi
ಶ್ರೀಹರಿಸೇವೆ ಸುಳಾದಿ
Composer: Vyasarajaru · Deity: Krishna · Genre: Sulaadi
Kannada lyrics
ಶ್ರೀಹರಿಸೇವೆ ಸುಳಾದಿ ರಾಗ ಸಾರಂಗ ಧ್ರುವತಾಳ ಹರಿ ಚರಿತೆ ಶ್ರವಣ ದುರಿತಕುಚ್ಛಾಟನಂ ಹರಿನಾಮ ಕೀರ್ತನೆ ಭವರೋಗಕ್ಕೆ ಸಿದೌಷಧಂ ಹರಿ ಚರಣ ಸ್ಮರಣ ಮುಕ್ತರೊಳಗರ್ಪಣಂ ಇಂತು ಹರಿಪಾದ ಸೇವೆ ಅನಂತ ಫಲ ಸಾಧನ ಇಂತೆಂಬದೊಂದು ಪೇರ್ಮೆಗೆ ಹರಿಸೇವೆ ಫಲರೂಪ ಶ್ರವಣವೆ ಶುಭದ ಬೆಳಗು ಕೀರ್ತನೆಯ ಲೇಸಿನ ಹೆಚ್ಚಿಗೆ ಸ್ಮರಣವಚ್ಚಸುಖವೆಂಬ ತೊಟ್ಟಲು ಎಂಬವದನುಭವದಸಿದ್ದಾ ಸಿರಿಕೃಷ್ಣನ್ನ ಪಾದಸೇವೆ ಎಲ್ಲದಿಲ್ಲ ಪಾದಮುಕ್ತಿ ಕನ್ನಿಕೆ ಸೇರುವೆ ॥ ೧ ॥ ಮಠತಾಳ ನೆನಹಿನ ಲೇಶಮಾತುರದಿಂದ ಮಹಾ ಘನಸುಖಮಯನಾಗಿ ಇಪ್ಪೇನಾವಾಗ ತನು ಭಾವವಳಿದು ಮೌನಿಗಳಂತೆ ಮೈಮರೆದು ಕುಜನಾಚಾರವಳಿದು ಸಲೆ ನಿನ್ನನನವರತ ನೆನೆವ ಭಕ್ತರ ಸುಖವಿನ್ನೆಂತೊ ಸಿರಿಕೃಷ್ಣ ॥ ೨ ॥ ತ್ರ…