Haridasa Sahitya — Vyasadasa
Adhyatma sulaadhi
ಅಧ್ಯಾತ್ಮ ಸುಳಾದಿ
Composer: Vyasarajaru · Deity: Krishna · Genre: Sulaadi
Kannada lyrics
ಅಧ್ಯಾತ್ಮ ಸುಳಾದಿ ರಾಗ ನಾಟಿ ಧ್ರುವತಾಳ ಕಾಮವೆಂಬ ಹೆಚ್ಚಿನ ಕಾಡುಗಿಚ್ಚು ಒಂದು ಕಡೆಯಲೆನ್ನ ಸುಡುತಲಿದೆ ಕ್ರೋಧವೆಂಬ ಹೆಬ್ಬುಲಿ ಹಸಿದು ಒಂದು ಕಡೆಯಲೆನ್ನ ತಿನ್ನುತಲಿದೆ ಲೋಭವೆಂಬ ಮಹರಕ್ಕಸನು ಒಂದು ಕಡೆಯಲೆನ್ನ ಹೀರುತೈಧಾನೆ ಮೋಹವೆಂಬ ಕಗ್ಗತ್ತಲೆಯು ಕವಿದು ದಿಕ್ಕು ದೆಸೆ ಏನು ತಿಳಿಯದು ಮದವೆಂಬ ಸೊಕ್ಕಿದ ಕಾಡಾನೆ ಒಂದು ಕಡೆ ಎನ್ನ ಸೀಳುತಿದೆ ಮತ್ಸರವೆಂಬ ಮಹ ವಿಷದ ಚೋಳು ಒಂದು ಕಡೆಯಲೆನ್ನ ಊರುತಿದೆ ಈ ಪರಿ ಭವವೆಂಬಡವಿಯಲಿ ನಾನಾ ಪರಿ ಶತ್ರುಗಳಿಗೊಳಗಾದೆ ಶ್ರೀಪತಿ ಪರಮ ದಯಾನಿಧೆ ದೀನ ನಾಥೆನ್ನೊಡಿಯ ರಕ್ಷಿಸು ಶ್ರೀಕೃಷ್ಣ ॥ ೧ ॥ ಮಠ್ಯತಾಳ ಆಗದ ಹೋಗದ ಮನೆವಾರುತೆ ಬೇರೊಬ್ಬ ಲೋಗರಿಗಾಗಿ ಹೊತ್ತು ಭವಾಟವಿಯಲ್ಲಿ ರಾಗವೆಂಬ ಘ…