Haridasa Sahitya — Vyasadasa

Vairagya sulaadhi

ವೈರಾಗ್ಯ ಸುಳಾದಿ

Composer: Vyasarajaru · Deity: Krishna · Genre: Sulaadi

Kannada lyrics

ವೈರಾಗ್ಯ ಸುಳಾದಿ ರಾಗ ಪಂತುವರಾಳಿ ಧ್ರುವತಾಳ ದೇಹ ಜೀರಣವಾಯಿತೊ ಧನ ನೇಹ ಜೀರಣವಾಗದೊ ಕಣ್ಣು ಕಿವಿ ಮಂದವಾದವೊ ಹೆಣ್ಣು ಮಣ್ಣಿನಾಶೆ ಮಂಣಾಗದು ಕಾಲು ಕೈ ಜವಗುಂದಿದವು ಭೋಗಲೋಲತೆಯು ಜವಗುಂದದೋ ಪಾಪ ಕೋಟಿಗಳು ಮಾಡಿದೆ ಅನುತಾಪ ಮನದೊಳಿನಿತಿಲ್ಲ ಜರೆನರೆಯಿಂದ ನೆರೆಹೊರೆ ಹೇಸಿತು ಶರೀರದೊಳು ಹೇಯವಿನಿತ್ತಿಲ್ಲ ಸಂದು ಹೋಯಿತು ಕಾಲವೆಲ್ಲವು ಮುಂದಣಗತಿಗೆ ದಾರಿ ದೊರದು ಅನಾದಿಯಿಂದ ನಾ ನಿನ್ನವನೆನಿಸಿದೆ ಎನ್ನ ಕೇಡು ನಿನ್ನದಲ್ಲವೆ ಇನ್ನಾದರು ದಯದಿಂದ ನೋಡಿ ನಿನ್ನ ಭಕ್ತಿಯನಿತ್ತು ಮನ್ನಿಸಬೇಕಯ್ಯ ಎನ್ನನ್ನು ಶ್ರೀಕೃಷ್ಣ ॥ ೧ ॥ ಮಠತಾಳ ಹರಿನಾಮ ಹರಿಪಾದ ತೀರಥವಿರಲು ದುರಿತದ ಭಯವ್ಯಾಕೆ ನರಕದ ಭೀತ್ಯಾಕೆ ಹರಿದಿನ ಹರಿದಾಸರ ಪದರಜವಿರ…