Haridasa Sahitya — Vyasadasa

Kshamapana sulaadhi

ಕ್ಷಮಾಪಣಾ ಸುಳಾದಿ

Composer: Vyasarajaru · Deity: Krishna · Genre: Sulaadi

Kannada lyrics

ಕ್ಷಮಾಪಣಾ ಸುಳಾದಿ ರಾಗ ನಾಟಿ ಧ್ರುವತಾಳ ಎನ್ನ ಮಹಾದೋಷಂಗಳು ಅನಂತವಾದರು ಅಂಜೆ ನಾ ನಿನ್ನ ಕಲ್ಯಾಣ ಗುಣಗಳು ಅನಂತನಂತವಾಗಿರೆ ಎನ್ನ ಅನ್ಯಥ ತಪ್ಪುಗಳು ಇನ್ನನಂತವಾದರೆ ಅಂಜೆ ನಾ ನಿನ್ನಪಾರ ಕರುಣಾ ಅನಂತಾನಂತವಾಗಿರೆ ಬಾವನ್ನ ಸಾರಿದ ಬೇಂವು ತಾ ಬಾವನ್ನವಲ್ಲದೆ ಬೇವಹದೆ ತನ್ನ ಶಿಶು ಮಾಡಿದ ತಪ್ಪಿಗೆ ಆ ಜನನಿ ಕೈ ಬಿಡುವಳೆ ನಿನ್ನವರನೆಂಬೊದೊಂದೆ ಸಾಲದೆ ಎನ್ನ ಜನುಮ ಜನುಮಕೆ ಸಿರಿಕೃಷ್ಣ ॥ ೧ ॥ ಮಠ್ಯತಾಳ ಹಿಂದಣ ಇಂದಣ ಮುಂದಣ ಚಂದಾ ಚಂದದ ಕರ್ಮನಂತ ಒಂದಾನೊಂದು ಕರ್ಮಾನುಂಬ ಕಾಲದೊಳಗೆ ಮತ್ತೊಂದು ಕರ್ಮಾ ಬಂದೊದಗುತಲಿದೆ ಎಂದು ತೀರುವದಯ್ಯಾ ಎಂದು ತೀರುವದಯ್ಯಾ ತಂದೆ ಕೃಷ್ಣ ನಿನ್ನ ಸಂದರುಶನವಿಲ್ಲದೀದಂದುಗಾ ನೀಗುವಾ ಬಗೆ ಬೇರಿಲ…