Haridasa Sahitya — Vyasadasa

Ahobila narasimha prarthana sulaadhi

ಅಹೋಬಿಲ ನರಸಿಂಹ ದೇವರ ಪ್ರಾರ್ಥನಾ ಸುಳಾದಿ

Composer: Vyasarajaru · Deity: Narasimha · Genre: Sulaadi

Kannada lyrics

ಅಹೋಬಿಲ ನರಸಿಂಹ ದೇವರ ಪ್ರಾರ್ಥನಾ ಸುಳಾದಿ ರಾಗ ಭೌಳಿ ಧ್ರುವತಾಳ ಶ್ರೀಪತಿ ಸಲಹೆಂದು ನೆನೆವಂಥ ಮನುಜರ ತಾಪತ್ರಯವ ನೂಕಿ ಮುಕ್ತಿಯನೀವ ಕೃಷ್ಣ ಅಕಳಂಕ ಚರಿತ ಆಶ್ರಿತಜನ ಪ್ರಿಯನ ಭಕ್ತವತ್ಸಲ ಸುರಧೇನು ಶ್ರೀಯರಸನು ಭಕ್ತಜನರ ದುಷ್ಕೃತಗಳ ಪರಿಹರ ಭುಜಗಶಯನ ಪ್ರಲ್ಲಾದ ವಂದಿತನು ಶ್ರೀಪತಿ ಸಲಹೆಮ್ಮ ಸುರರು ಸುಮ್ಮನದಿ ಪೂ ಮಳೆಗರೆಯಲು ಪರಮ ಪುರುಷವಿತ್ತು ಸಲಹುವ ಹರಿಯೆಂದು ನಿನ್ನ ನೆರೆನಂಬಿದೆನೊ ಲೀಲಾವತಾರ ಪ್ರಸನ್ನ ಮೂರುತಿ ಅಹೋಬಿಲ ನರಹರಿ ಕೃಷ್ಣ ಶ್ರೀಪತಿ ಸಲಹೆಂದು ॥ ೧ ॥ ಮಟ್ಟತಾಳ ನಾರದಾದಿ ಅಂಬರೀಷ ಗೋವಾರ ಗಂಧರ್ವ ವಂದಿತ ಶ್ರೀರಮಣ ಸರ್ವಪೂಜಿತಾ ಗಂಭೀರಪುರುಷ ಲಕ್ಷ್ಮೀವಲ್ಲಭ ಶ್ರೀರಮಣ ಪೂಜಿತ ಕಾರುಣ್ಯಮೂರುತಿ ಕಾಯೋ ಕರುಣ…