Haridasa Sahitya — Vyasadasa
Bhaktadhina sulaadhi
ಭಕ್ತಾಧೀನ ಸುಳಾದಿ
Composer: Vyasarajaru · Deity: Krishna · Genre: Sulaadi
Kannada lyrics
ಭಕ್ತಾಧೀನ ಸುಳಾದಿ ರಾಗ ಮುಖಾರಿ ಧ್ರುವತಾಳ ನಾನಾ ಯಜ್ಞದ ಹವಿರ್ಗಳಿಂದ ಕದ್ದಾ ಬೆಣ್ಣಿಯು ಮಿಗಿಲೆ ಜ್ಞಾನಿಗಳಿತ್ತಾ ಉಪಹಾರಗಳಿಂದಂ ವಪ್ಪಿಡಿ ಆವಲೊಳಿತೆ ಶ್ರೀನಾರಿ ಮಾಡುವ ಸೇವೆಗಳಿಂದಂ ಯಜ್ಞ ಪತ್ತೇರ ತಿರಿಕೆ ಭಿಕ್ಷೆಯು ಬೇಕೆ ಏನನ್ನೆ ಬಾರದ ನಿನ್ನಾನಂದಕೆ ವಿದುರನೌತುನ ಮಿಗಿಲೆ ಬೇಕೆ ಅಯ್ಯಾ ಮಾನಸ ವಚನಕಗೋಚರವಾದ ಆನಂದ ನೀನಲ್ಲವೆ ಏನಯ್ಯ ನಿನ್ನ ಭಕ್ತ ವಾತ್ಸಲ್ಯತನವೊ ಎಲೆ ಎಲೆ ಕೃಷ್ಣಯ್ಯ ನೀನೇವೆ ಬೇಡಿ ಕಾಡಿ ಯಶೋದೇಯ ಕಾಯ್ಯಾ ಉಘಾನೆರಸಿಕೊಂಡು ನಲಿದೇ ಅಯ್ಯಾ ॥ ೧ ॥ ಮಠ್ಯತಾಳ ಶ್ರೀವರ ಪರಾಕು ಚಿತ್ತವಧಾರಿ ಎಂದು ನಿನ್ನ ಆವಗ ಅಜಭವಾದಿ ದೇವರೋಸುತಿರೆ ದೇವ ಸಾರ್ವಭೌಮ ನೀನುಗ್ರಶೇನಂಗೆ ದೇವ ಜೀಯ್ಯ ಸಾಸಮುಖವೆಂದೆಂಬದು ಆವ ಲ…