Haridasa Sahitya — Vyasadasa
Dridhabhakti sulaadhi
ದೃಢಭಕ್ತಿ ಸುಳಾದಿ
Composer: Vyasarajaru · Deity: Krishna · Genre: Sulaadi
Kannada lyrics
ದೃಢಭಕ್ತಿ ಸುಳಾದಿ ರಾಗ ಸಾವೇರಿ ಧ್ರುವತಾಳ ತಾಯಿ ಎಂಬೆನೆ ನಿನ್ನ, ಧ್ರುವನ ತಾಯಿ ನಿನ್ನಂತೆ ಕಾಯ್ದಳೆ ತಂದೆ ಎಂಬೆನೆ ನಿನ್ನ, ಪ್ರಹ್ಲಾದನ ತಂದೆ ನಿನ್ನಂತೆ ಕಾಯ್ದನೆ ಭ್ರಾತೃ ಎಂಬೆನೆ ನಿನ್ನ, ವಿಭೀಷಣನ ಭ್ರಾತೃ ನಿನ್ನಂತೆ ಕಾಯ್ದನೆ ಭರ್ತೃ ಎಂಬೆನೆ ನಿನ್ನ, ಪಾಂಚಾಲಿಯ ಭರ್ತರು ನಿನ್ನಂತೆ ಕಾಯ್ದರೆ ಪುತ್ರನೆಂಬೆನೆ ನಿನ್ನ, ಉಗ್ರಸೇನನ ಪುತ್ರ ನಿನ್ನಂತೆ ಕಾಯ್ದನೆ ಮಿತ್ರನೆಂಬನೆ ನಿನ್ನ, ಗಜೇಂದ್ರನ ಮಿತ್ರರು ನಿನ್ನಂತೆ ಕಾದರೆ ಆವ ಅನಿಮಿತ್ತ ಬಂಧುವೊ ಮೇಣಾವ ನೀನಾವ ಕರುಣಾಸಿಂಧುವೋ ಸಿರಿಪತಿ ಸಿರಿಕೃಷ್ಣ ನಿನ್ನ ಭಕ್ತರಲಿ ನೆಂಟತನ ಹೊಸಪರಿಯಾಯಿತಯ್ಯಾ ॥ ೧ ॥ ಮಠತಾಳ ದಾನಿಗಳರಸಂಗೆ ದೈನ್ಯ ಬಲಿ ಲಕ್ಷುಮಿಪತಿಗೈದೆ ಯಜ್ಞ ಭಿಕ…