Haridasa Sahitya — Vyasadasa
Prarthana sulaadhi
ಪ್ರಾರ್ಥನಾ ಸುಳಾದಿ
Composer: Vyasarajaru · Deity: Krishna · Genre: Sulaadi
Kannada lyrics
ಪ್ರಾರ್ಥನಾ ಸುಳಾದಿ ರಾಗ ಕಲ್ಯಾಣಿ ಧ್ರುವತಾಳ ಶ್ರೀದೇವಿಯ ಶ್ರೀಮಂತ ಸಿಂಧೂರಗಳಂ ಅತಿ ಅತಿ ರಂಜಿತವಾದ ಶ್ರೀದೇವಿಯ ಕಸ್ತೂರಿ ತಿಲಕದಿಂ ಅತಿ ಅತಿ ವಾಸಿತವಾದ ಶ್ರೀ ಕುಚಕುಂಭ ಕುಂಕುಮದಿಂ ಅತಿ ಅತಿ ಶೋಭಿತವಾದ ಶ್ರೀದೇವಿಯ ಕರಕಂಜ ಸುರೇಖೆಗಳಿಂದ ಅತಿ ಅತಿ ಅಂಕಿತವಾದ ಶ್ರೀ ವನಜಭವಾದಿ ಹೃತ್ಪರೋವರದಿಂ ಸರಸಿಜದಂತೆ ನಿಲಸಿಪ್ಪ ಸನಕಾದಿ ಹೃದಯಾಂಬುಜದಿಂ ಹಂಸೆಯಂತೆ ನಲಿಯುತಿಪ್ಪ ಮನುಜೋತ್ತಮರ ಹೃದಯಾಂಬರದಿಂ ಮಿಂಚಿನಂತೆ ಹೊಳೆ ಹೊಳೆವ ಸಿರಿಕೃಷ್ಣನ ಚರಣಕಮಲ ಶರಣ ಎನಗೆಂದೆಂದು ॥ ೧ ॥ ಮಟ್ಟತಾಳ ನಿಧಿಯ ಮೇಲೆ ಇದ್ದು ನಿಧಿಯನರಿಯದಂತೆ ತನ್ನ ಕಂಠಮಣಿಯ ತಾ ಮರೆದಂತೆ ಕಣ್ಣೆರೆಯದ ಹಸುಳೆ ತಾಯನರಿಯದಂತೆ ಎನ್ನಲ್ಲಿ ಹೊಂದಿಪ್ಪ ನಿನ್ನರಿಯದಂತ…