Haridasa Sahitya — Vyasadasa
Udayadri Sri Krishna sulaadhi
ಉದಯಾದ್ರಿ ಶ್ರೀಕೃಷ್ಣ ಸುಳಾದಿ
Composer: Vyasarajaru · Deity: Krishna · Genre: Sulaadi
Kannada lyrics
ಉದಯಾದ್ರಿ ಶ್ರೀಕೃಷ್ಣ ಸುಳಾದಿ ರಾಗ ಬಾಗೇಶ್ರೀ ಧ್ರುವತಾಳ ಅಂತರಂಗದಿ ಬ್ರಹ್ಮಾನಂದನಾಗಿ ನೀನಿರಲು ಅಂತಕನ ಭಯವೇನಯ್ಯ ಶ್ರೀಹರಿಯೆ ಪಂಥದಿ ದನುಜನು ಬಾಧಿಸಲು ಸುತನ ಚಿಂತೆ ಯಾರಿಗೋ ಎಂದಿರದೆ ಸಾಕಿದೆ ಉದಯಾದ್ರಿ ಶ್ರೀಕೃಷ್ಣ ॥ ೧ ॥ ಮಠ್ಯತಾಳ ಮುರಹರ ನರಹರಿ ಸಿರಿವರ ಗಿರಿಧರ ಎಂದು ಕರೆಯಲು ಕರುಣದಿ ಬಂದು ಕರಿಯ ಕಾಯಿದೆ ಸಂತೋಷದಿ ಕಾಯಿದೆ ನರಕಾಂತಕ ಉದಯಾದ್ರಿ ಶ್ರೀಕೃಷ್ಣ ॥ ೨ ॥ ತ್ರಿಪುಟತಾಳ ತನ್ನ ತಾನರಿಯಾದೆ ತಗುಲಿದ ಕಾಳಿಯನು ನಿನ್ನ ಪರಾಕ್ರಮ ತೋರಿ ಕಾಯಿದೆ ಶ್ರೀಹರಿಯೆ ಮುನ್ನ ನಾ ನಿನ್ನ ಡಿಂಗರಿಗನಾದೆನಯ್ಯಾ ಪನ್ನಗಾಸನ ತುರಗ ಪಾಲಿಸು ಉದಯಾದ್ರಿ ಶ್ರೀಕೃಷ್ಣ ॥ ೩ ॥ ಅಟ್ಟತಾಳ ನಿನ್ನ ಮೃದು ಪಾದವ ನೋಯದಂತೆ ಎನ್ನ ಶಿರಸ್ಸ…