Haridasa Sahitya — Vyasadasa
Upasana sulaadhi
ಉಪಾಸನಾ ಸುಳಾದಿ
Composer: Vyasarajaru · Deity: Krishna · Genre: Sulaadi
Kannada lyrics
ಉಪಾಸನಾ ಸುಳಾದಿ ರಾಗ ಕಾಪಿ ಧ್ರುವತಾಳ ತಾಯಿ ಈ ಲೋಕಕ್ಕೆ ಶ್ರೀಹರಿ ಕಾಯದಿಂ ಜಗವಂ ಆದಿಯೋಳಿಟ್ಟನಾಗಿ ತಂದೆ ಈ ಲೋಕಕ್ಕೆ ಶ್ರೀಹರಿ ಅಂದೆ ಬೊಮ್ಮಾದಿಗಳ ಸೃಜಿಸಿದವನಾಗಿ ಒಡಿಯಾ ಈ ಲೋಕಕ್ಕೆ ಶ್ರೀಹರಿ ಬಿಡದೆ ರಾಮಾದಿ ರೂಪದಿಂ ಪೊರೆವನಾಗಿ ಈಶ ಈ ಲೋಕಕ್ಕೆ ಶ್ರೀಹರಿ ವ್ಯಾಸಾದಿ ರೂಪದಿ ಜ್ಞಾನವ ನೀವನಾಗಿ ಪರತತ್ವ ಈ ಲೋಕಕ್ಕೆ ಶ್ರೀಹರಿ ಶ್ರೀವರ ಮುಕ್ತಿಯನೊಬ್ಬ ನೀವನಾಗಿ ಗತಿ ಈ ಲೋಕಕ್ಕೆ ಶ್ರೀಹರಿ ಶ್ರೀಪತಿ ತನ್ನ ನೆನೆವರಿಗಭಯವ ನೀವನಾಗಿ ದೈವ ಈ ಲೋಕಕ್ಕೆ ಶ್ರೀಹರಿ ಸೇವ್ಯನಾಗಿ ತಮ್ಮ ತಮ್ಮ ಧರ್ಮಗಳಿಂದ ಸರ್ವ ಈ ಲೋಕಕ್ಕೆ ಶ್ರೀಹರಿ ಶ್ರೀಕೃಷ್ಣನೋರ್ವನು ಸರ್ವ ವ್ಯಾಪಕನಾಗಿ ತಾಯಿ ಈ ಲೋಕಕ್ಕೆ ಶ್ರೀಹರಿ ॥ ೧ ॥ ಮಠ್ಯತಾಳ ಪತಿ ಎಂದು…
Transliteration
upaasanaa sulaadi raaga kaapi dhruvataala taayi ii lokakke shriihari kaayadin jagavan aadiyolittanaagi tande ii lokakke shriihari ande bommaadigala srrijisidavanaagi odiyaa ii lokakke shriihari bidade raamaadi roopadin porevanaagi iisha ii lokakke shriihari vyaasaadi roopadi jnaanava niivanaagi paratatva ii lokakke shriihari shriivara muktiyanobba niivanaagi gati ii lokakke shriihari shriipati tan…