Haridasa Sahitya — Vyasadasa

Vyapti sulaadhi

ವ್ಯಾಪ್ತಿ ಸುಳಾದಿ

Composer: Vyasarajaru · Deity: Krishna · Genre: Sulaadi

Kannada lyrics

ವ್ಯಾಪ್ತಿ ಸುಳಾದಿ ರಾಗ ಮೋಹನ ಧ್ರುವತಾಳ ತಂದೆಯಾಗಿ ತಾಯಿಯಾಗಿ ಇಂದಿರೇಶನೆ ಎನಗೆ ಬಂಧುವಾಗಿ ಬಳಗವಾಗಿ ಶಿಂಧುಶಯನನೆ ಹಿಂದಾಗಿ ಮುಂದಾಗಿ ಮುಕ್ಕುಂದನೆ ಎನಗೆ ಸ್ವಾಮಿಯಾಗಿ ಭೂಮಿಯಾಗಿ ರಕ್ಕಸಾಂತಕನೆ ಗುರುವಾಗಿ ದೈವವಾಗಿ ದೇವೋತ್ತಮನೆ ಎನಗೆ ವಿದ್ಯೆಯಾಗಿ ಬುದ್ಧಿಯಾಗಿ ವಿದ್ಯಾಪತಿಯೆ ದಿಕ್ಕಾಗಿ ದಿಶೆಯಾಗಿ ರಾಮಚಂದ್ರನೆ ಎನಗೆ ಇಹವಾಗಿ ಪರವಾಗಿ ಶ್ರೀಕೃಷ್ಣನೆ ॥ ೧ ॥ ಮಠ್ಯತಾಳ ಬೊಮ್ಮನಮ್ಮ ರುಗಿಣಿ ರಾಣಿದೇವಿಯು ಪೆರ್ಮೆಯ ಅಜನು ಹೆಮ್ಮಗ ಹಮ್ಮಿನ ರುದ್ರ ಮೊಮ್ಮಗ ಸುಮನಸರೆಲ್ಲ ಪರಿವಾರ ನಮ್ಮ ಸ್ವಾಮಿ ಕೃಷ್ಣ ಎಂದರೆ ಪೆರ್ಮೆ ಇಂದೊಲಿದಿಲ್ಲವೇ ॥ ೨ ॥ ರೂಪಕತಾಳ ದೂರದೊಳ್ ನಿಂದೊಮ್ಮೆ ಗೋವಿಂದ ಗೋವಿಂದ ಅನಾಥಬಂಧುವೆ ದ್ವಾರಕಾವಾಸಿಯ…