Haridasa Sahitya — Vyasadasa

Sushupti sulaadhi

ಸುಷುಪ್ತಿ ಸುಳಾದಿ

Composer: Vyasarajaru · Deity: Krishna · Genre: Sulaadi

Kannada lyrics

ಸುಷುಪ್ತಿ ಸುಳಾದಿ ರಾಗ ನೀಲಾಂಬರಿ ಧ್ರುವತಾಳ ಆಲದೆಲೆಯಲ್ಲಿ ಮಲಗಿದಂದು ನಿನ್ನ ಲಾಲಿ ಎಂದು ಲಾಲಿಸಿದರಾರೈ ಮತ್ತೆ ಕ್ಷೀರಾಬ್ಲಿಯಲ್ಲೊರಗಿದಂದು ನಿನ್ನ ತೃಯೆಂದು ತೂಗಿದರಾರೈ ಆ ಜಲಧಿ ದರ್ಭಶಯನದಲ್ಲಿ ನಿನ್ನ ಜೋ ಜೋ ಎಂದು ಪಾಡಿದರಾರೈ ಆ ರಮೆ ಸ್ತುತಿ ಮಾಡಿ ಪೊಗಳುವಂತೆ ಶ್ರೀರಮಣ ನಿನ್ನ ಪಾಡಬಲ್ಲೇನೇ ನಾರದ ಮಹತೀಯ ಮೀಟುವಂತೆ ಸ- ಮೀರಜ ಸ್ವರವೆತ್ತಿ ಪಾಡುವಂತೆ ಶ್ರೀರಮಣ ನಿನ್ನ ಪೊಗಳಬಲ್ಲೆನೆ ನಾನು ಕಣ್ಣ ಮುಚ್ಚು ಪಾಲೂಡುವೆನೆಂತೆನೆ ಗೋಪಿ ಕಣ್ಣು ಮುಚ್ಚಿ ಕೃಷ್ಣ ಕಿವಿಯಾಂತು ನಗುತಿದ್ದ ॥ ೧ ॥ ಮಠತಾಳ ತನ್ನುರದ ಮೋಹದರಸಿಯ ಚನ್ನ ಚೆಲುವ ಸರಸಗಳಿಂದ ಇನ್ನು ನಿದ್ರೆ ಬಾರದೆ ನಿನ್ನ ಪೊಕ್ಕಳ ಬೊಮ್ಮನ ನಾಲ್ಕು ವದನದ ವೇದ ಘೋಷಣಗಳ…