Haridasa Sahitya — Vyasadasa
Ambegalu Krishna sulaadhi
ಅಂಬೆಗಾಲು ಕೃಷ್ಣ ಸುಳಾದಿ
Composer: Vyasarajaru · Deity: Krishna · Genre: Sulaadi
Kannada lyrics
ಅಂಬೆಗಾಲು ಕೃಷ್ಣ ಸುಳಾದಿ ರಾಗ ನಾಟಿ ಧ್ರುವತಾಳ ನೀಲಮೇಘಶ್ಯಾಮ ಕೋಮಲಾಂಗದ ಮೇಲೆ ಶಿರದಲ್ಲಿ ರಂಜಿಪ ಬಾಲ ಸೂರ್ಯಕೋಟಿತೇಜ ರತುನ ಮುಕುಟ ಭಾಳದೊಳರಳೆಲೆ ಕಿವಿಗಳಲಿ ಮಾಗಾಯಿಗಳ ಕಮಲನೇತ್ರದ ಮೂಲೋಕವ ಮೋಹಿಸುವ ನಾಶಿಕದ ಕಮಲವದನ ವಿಶಾಲೋರ ಸ್ಥಳದ ಸಿರಿ ಸಿರಿಗಂಧ ಕೌಸ್ತುಭ ವೈಜಯಂತಿ ಮಾಲೆಯಂ ನಳಿ ತೋಳು ನಡುವಿನ ಪೀತಾಂಬರದ ಮೌಕ್ತಿಕ ಜಾಲದಲ್ಲಿನ ಖಡೆಯ ಪೆಂಡೆಯು ಪದಕಗಳೆಸೆಯೇ ನೀಲಮೇಘಶ್ಯಾಮಾ ಆ ಆ ಆನತಜನ ಪಾಲಕನವತಾರವಾದ ಬಾಲಲೀಲಾ ಲೋಲಾ ಅಂಬೆಗಾಲು ಕೃಷ್ಣ ನಿನ್ನ ದಿವ್ಯ ಮೂರುತಿಯ ಎನ್ನ ಹೃದಯ ಆಲಯದೊಳಗಿರಿಸೊ ಪರಮಾನಂದ ಶರಧಿಯಲಿ ಬಿಡದೋಲಾಡುವಂತೆನ್ನ ಮಾಡು ನೀಲಮೇಘಶ್ಯಾಮ್ ॥ ೧ ॥ ಮಟ್ಟತಾಳ ಶುಕ ಶೌನಕ ಸನಕ ಸನಂದನ ಸನತ್ಕುಮಾರಕ ಪ್ರ…