Haridasa Sahitya — Vyasadasa

Vyarthavallave janma

ವ್ಯರ್ಥವಲ್ಲವೆ ಜನ್ಮ

Composer: Sripadarajaru · Deity: Vishnu · Genre: Advice

Kannada lyrics

ವ್ಯರ್ಥವಲ್ಲವೆ ಜನ್ಮ ವ್ಯರ್ಥವಲ್ಲವೆ ||ಪ|| ತೀರ್ಥಪಾದರ ಭಜಿಸಿ ಕೃತಾರ್ಥನಾಗದವನ ಜನ್ಮ ||ಅ.ಪ|| ಅರುಣ ಉದಯದಲ್ಲಿ ಎದ್ದು ಸರಿತದಲಿ ಸ್ನಾನವ ಮಾಡಿ ಅರಳುಮಲ್ಲಿಗೆ ಮಾಲೆ ಹರಿಯ ಚರಣಕರ್ಪಿಸದವನ ಜನ್ಮ ||೧|| ಒಂದು ಶಂಖ ಉದಕ ತಂದು ಚಂದದಿಂದ ಹರಿಗೆ ಎರೆದು ಗಂಧ ಪುಷ್ಪದಿಂದ ಹರಿಯ ವಂದನೆ ಮಾಡದವನ ಜನ್ಮ ||೨|| ಮುಗುಳು ತೆನೆಯಲೆಸೆವ ತುಳಸಿದಳವ ತಂದು ಪ್ರೇಮದಿಂದ ಜಗನ್ಮಯಗೆ ಅರ್ಪಿಸಿ ಕರವ ಮುಗಿದು ಸ್ತುತಿಸದವನ ಜನ್ಮ ||೩|| ಭೋಗಿಶಯನನ ದಿನದಿ ಸಕಲ ಭೋಗಗಳನು ತಾನು ತೊರೆದು ಭಾಗವತರ ಮ್ಯಾಳದಿಂದ ಜಾಗರಣೆ ಮಾಡದವನ ಜನ್ಮ ||೪|| ಜಂಗಮರೊಳಗಧಿಕವನಿಪ ಭಂಗುರ ಮನುಷ್ಯದೇಹ ಪಡೆದು ರಂಗವಿಠಲನೆನಿಪ ಪಶ್ಚಿಮರಂಗಗರ್ಪಿಸದವನ ಜನ್ಮ ||೫||

Transliteration

Vyarthavallave janma vyarthavallave || pa || Teerthapaadara bhajisi krutaarthanaagadavana janma || a. Pa || Aruna udayadalli eddu saritadali snaanava maadi | aralu mallige maale hariya charanakarpisadavana janma || 1 || Ondu shankha udaka tamdu chandadinda harige eredu | gandha pushpadinda harige vandane maadadavana janma || 2 || Mugulu teneyaleseva tulasidala tandu premadinda | jaganmayage arpisi…