Haridasa Sahitya — Vyasadasa

Vrushabanerida vishadharanyare

ವೃಷಭನೇರಿದ ವಿಷಧರನ್ಯಾರೆ

Composer: Sripadarajaru · Deity: Shiva / Rudra Devaru · Genre: Dasara Pada

Kannada lyrics

ವೃಷಭನೇರಿದ ವಿಷಧರನ್ಯಾರೆ ಪೇಳಮ್ಮಯ್ಯ || ಪ || ಹಸುಳೆ ಪಾರ್ವತಿಯ ತಪಸಿಗೆ ಮೆಚ್ಚಿದ ಜಟಾಕುಂಡಲಧಾರಿ ಕಾಣಮ್ಮ || ಅ.ಪ || ಕೈಲಾಸಗಿರಿಯ ದೊರೆಯಿವನಮ್ಮ – ಅದು ಅಲ್ಲದೆ ಕೇಳೆ ಬೈಲು ಸ್ಮಶಾನದಿ ಮನೆಯಿವಗಮ್ಮ – ಸಂಕರ್ಷಣನೆಂದು ಕೇಳೆ ಮಹಿಯೊಳು ಜನಪೊಗಳುವರಮ್ಮ – ಇದು ನೈಜವಮ್ಮ ನಾಲಿಗೆ ಸಾಸಿರ ಫಣಿಭೂಷಣನಮ್ಮ ರಮೆಯರಸಗೆ ಇವ ಮೊಮ್ಮಗನಮ್ಮ || ೧ || ಬಾಲೆ ದಾಕ್ಷಾಯಣಿ ಪತಿ ಇವನಮ್ಮ – ಮಾನವ ಯಾಗದಲಿ ಬ್ಹಾಳ ಕೃತ್ಯಗಳನು ನಡೆಸಿದನಮ್ಮ – ಸಾಗರದಲಿ ಹುಟ್ಟಿದ ಕಾಳಕೂಟವ ಭಕ್ಷಿಸಿದನಮ್ಮ – ರಾಮನ ದಯವಮ್ಮ ಮೇಲೆ ಉಳಿಯಲು ಶೇಷಗರಳವು ನೀಲಕಂಠನೆಂದೆನಿಸಿದನಮ್ಮ || ೨ || ಹರನೊಂದಿಗೆ ವೈಕುಂಠಕೆ ಬರಲು – ತಾತಗೆ ವಂದಿಸುತ ತರಣೀ ರೂಪವ ನೋಡ…

Transliteration

Vrushabanerida vishadharanyare pelammayya || pa || Hasule parvatiya tapasige mecchida Jatakundaladhari kanamm || a.pa || Kailasagiriya doreyivanamma – adu allade kele Bailu smasanadi maneyivagamma – sankarshananendu Kele mahiyolu janapogaluvaramma – idu naijavamma Nalige sasira panibushananamma Rameyarasa iva mommaganamma || 1 || Bale dakshayani pati ivanamma – manava yagadali B~hala krutyagalanu…