Haridasa Sahitya — Vyasadasa
Vrundavanagaliga namisi(Song on Nava brindhavana)
ವೃಂದಾವನಗಳಿಗಾನಮಿಸಿ ನಿತ್ಯ
Composer: Jagannatha Dasaru · Deity: Guru Parampara · Genre: Dasara Pada
Kannada lyrics
ವೃಂದಾವನಗಳಿಗಾನಮಿಸಿ ನಿತ್ಯ ನಂದ ತೀರ್ಥ ಮತೋದ್ದಾರಕರೆನಿಪ||pa|| ವರ ಮಧ್ವಮುನಿ ಕಮಲಕರ ಪದ್ಮ ಸಂಜಾತ ಗುರು ಪದ್ಮನಾಭ ಶ್ರೀ ರಾಮತೀರ್ಥ ಕವೀಂದ್ರಾ ಕರಸರೋರುಹ ಜಾತ ವಾಗೀಶಮುನಿ ಪರಘುವರ್ಯ ಗೋವಿಂದಾಖ್ಯ ಒಡೆಯರ ಪವಿತ್ರತಮ ||1|| ಶ್ರೀ ಸುಧೀಂದ್ರಾರ್ಯರ ಪ್ರಪೌತ್ರರೆನಿಪ ವಸುಧೀಂದ್ರ ವ್ಯಾಸರಾಯ ಶ್ರೀನಿವಾಸ ಮುನಿಯಾ ಭೂಸುರರು ಪರಮ ಸಂತೋಷದಲಿ ಸ್ಮರಿಸೆ ನಿ ರ್ದೋಷರನ ಮಾಡಿ ಅಭಿಲಾಷೆ ಪೂರೈಸುತಿಹ ||2|| ದೇವತೆಗಳು ಇವರು ಸಂದೇಹ ಬಡಸಲ್ಲಾ ಮಿ ಥ್ಯಾವಾದಿಗಳ ಪರಾಭವ ಮಾಡಿ ಈ ವಸುಂಧರೆಯೊಳಗೆ ಕೀರ್ತಿಯುತರಾಗಿ ಲಕ್ಷ್ಮೀವರ ಜಗ ನ್ನಾಥ ವಿಠಲನ ಐದಿಹರಾ ||3||
Transliteration
Vrundavanagaliga namisi nitya tirthananda matoddharakarenipa | pa | Vara madhvamuni kamalakara padmasanjata gurupadmanaba Sriramatirtha kavindra- Karasaroruha jata vagisamunipa raguvarya Govindakya odeyara pavitratama ||1|| Srisudheendraryara prapautrarenipa vasudhindra vyasaraya srinivasamuniya | Busuraru parama santoshadali smarise nirdosharana madi abilashe puraisutiha|| 2|| |Devategalu ivaru s…