Haridasa Sahitya — Vyasadasa

Vrundavanadali rajipa

ವೃಂದಾವನದಲಿ ರಾಜಿಪ

Composer: Haridasa · Deity: Raghavendra Teertharu · Genre: Dasara Pada

Kannada lyrics

ವೃಂದಾವನದಲಿ ರಾಜಿಪ ಯತಿವರನ್ಯಾರೇ ಪೇಳಮ್ಮಯ್ಯ || ಪ || ಇಂದಿರೆಯನರಸನ ಚಂದದಿ ಭಜಿಸುವ ಕುಂದುರಹಿತ ರಾಘವೇಂದ್ರ ಕಾಣಮ್ಮ || ಅ || ಮಂತ್ರಾಲಯಕೃತಮಂದಿರನೆನಿಸುವನ್ಯಾರೇ ಪೇಳಮ್ಮಯ್ಯ ತಂತ್ರದೀಪಿಕಾ ಗ್ರಂಥಕರ್ತನ್ಯಾರೇ ಪೇಳಮ್ಮಯ್ಯ ಕಂತುಪಿತನ ಸತ್ಪಂಥದಿ ಭಜಿಸುವನ್ಯಾರೇ ಪೇಳಮ್ಮಯ್ಯ ಚಿಂತಿತಫಲದ ದುರಂತಶಕ್ತ ಜಯವಂತ ನೀತ ಅಘಶಾಂತ ಕಾಣಮ್ಮ || ೧ || ಶ್ರೀಸುಧೀಂದ್ರಕರಕಮಲಜನೆನಿಸುವನ್ಯಾರೇ ಪೇಳಮ್ಮಯ್ಯ ತಾ ಸ್ವಪ್ನದಿ ಮಂತ್ರಾಕ್ಷತೆ ಕೊಡುತಿಹನ್ಯಾರೇ ಪೇಳಮ್ಮಯ್ಯ ಆಶುಗಮನಮತ ಸ್ಥಾಪಕನೆನಿಸುವನ್ಯಾರೇ ಪೇಳಮ್ಮಯ್ಯ ಭಾಸುರಜ್ಞಾನ ವಿಶೇಷವಾಗಿ ಹರಿದಾಸ್ಯವ ಪಡೆದ ಯತೀಶ ಕಾಣಮ್ಮ || ೨ || ಧಾರುಣಿಪತಿಸುತೆ ತೀರದಿ ನೆಲೆಸಿಹನ್ಯಾರೇ ಪೇಳ…

Transliteration

Vrundavanadali rajipa yativaranyare pelammayya || pa || Indireyanarasana chandadi Bajisuva Kundurahita raghavendra kanamma || a || Mantralaya krutamandiranenisuvanyare pelammayya Tantradipika gramthakartanyare pelammayya Kantupitana satpamthadi bajisuvanyare pelammayya Chintitapalada durantasakta jayavanta nita agasanta kanamma || 1 || Srisudhindra karakamala janenisuvanyare pelammayya Ta svapnadi…