Haridasa Sahitya — Vyasadasa

Vrundavana nodiro

ವೃ೦ದಾವನ ನೋಡಿರೋ

Composer: Haridasa · Deity: Raghavendra Teertharu · Genre: Dasara Pada

Kannada lyrics

ವೃ೦ದಾವನ ನೋಡಿರೋ – ಗುರುಗಳ ವೃಂದಾವನ ಪಾಡಿರೋ || ಪ || ವೃಂದಾವನ ನೋಡಿ – ಆನಂದ ಮದವೇರಿ ಚಂದದಿ ದ್ವಾದಶ ಪೌಂಡ್ರಾಂಕಿತಗೊಂಬ || ಅ || ತುಂಗಭದ್ರಾ ನದಿಯ ತೀರದಿ ಇದ್ದ ತುಂಗಮಂಟಪ ಮಧ್ಯದಿ ಶೃಂಗಾರ ಶ್ರೀ ತುಳಸಿ ಪದ್ಮಾಕ್ಷ ಸರಗಳಿಂದ ಮಂಗಳಕರ ಮಹಾ ಮಹಿಮೆಯಿಂದೊಪ್ಪುವ || ೧ || ದೇಶದೇಶದಿ ಮೆಚ್ಚುತ ಇಲ್ಲಿಗೆ ಬಂದು ವಾಸವಾಗಿ ಸೇವಿಪ ಭಾಷೆ ಕೊಟ್ಟಂದದಿ ಬಹುವಿಧ ವರಗಳ ಸೂಸುವ ಕರ ಮಹಾಮಹಿಮೆಯಿಂದೊಪ್ಪುವ || ೨ || ನಿತ್ಯ ಸನ್ನಿಧಿ ಸೇವಿಪ ಭಕ್ತರಿಗೆಲ್ಲ ಮತ್ತಭೀಷ್ಟವ ಕೊಡುತ ಸತ್ಯಾದಿಗುಣಸಿಂಧು ವೆಂಕಟವಿಠ್ಠಲನ ನಿತ್ಯಸನ್ನಿಧಿಯಿಂದ ನಿರುತ ಪೂಜೆಯಗೊಂಬ || ೩ ||

Transliteration

Vrundavana nodiro – gurugala Vrundavana padiro || pa || Vrundavana nodi – Ananda madaveri Chandadi dvadasa paundrankitagomba || a || Tungabadra nadiya tiradi idda Tungamantapa madhyadi Srungara sri tulasi padmaksha saragalinda Mangalakara maha mahimeyindoppuva || 1 || Desadesadi meccuta illige bandu Vasavagi sevipa Bashe kottandadi bahuvidha varagala Susuva kara mahamahimeyindoppuva || 2 || Nitya…