Haridasa Sahitya — Vyasadasa
Vittala pidi enna kayya
ವಿಠಲಾ ಪಿಡಿ ಎನ್ನಕೈಯಾ
Composer: Prasanna Venkata Dasaru · Deity: Vittala · Genre: Dasara Pada
Kannada lyrics
ವಿಠಲಾ ಪಿಡಿ ಎನ್ನಕೈಯಾ ವಿಠಲಾ ಪಂಢರಿರಾಯಾ||ಪ|| ವಿಠಲ ಭಕ್ತವತ್ಸಲಾ ವಿಠಲ ಹರಿ ವಿಠಲಾ ||ಅಪ|| ದಿಟ್ಟ ಪುಂಡಲೀಕ ತನ್ನ ಪುಟ್ಟಿಸಿದವರ ಮನ| ಮುಟ್ಟಿ ಭಜಿಸಲು ಚಿತ್ತ ಗೊಟ್ಟು ಬಂದೆಯಾ ವಿಠಲಾ ||೧|| ಕೊಟ್ಟ ಮಾತಿಗೆ ಭಕ್ತರ ಕಟ್ಟಿನೊಳು ಸಿಲುಕಿ ಕಂ|| ಗೆಟ್ಟೆಯಭವಾಬ್ದಿಯಲಿ ನಿನ್ನ ಗುಟ್ಟು ತೋರಯ್ಯ ವಿಠಲಾ ||೨|| ಬಿಟ್ಟು ಬರಲಾಗದ ನಿನಗೆ ಥಟ್ಟನೆ ನೀಡಲು ಚಲುವ|| ಇಟ್ಟಿಗೆಯ ಮೇಲೆ ಅಂಘ್ರಿ ಪದ್ಮ ಇಟ್ಟು ನಿಂತೆಯಾ ವಿಠಲಾ||೩|| ನೆಟ್ಟನೆ ವೇದವ ತಂದು ಬೆಟ್ಟವೆತ್ತಿ ಇಳೆಯಾ ಪೊತ್ತಿ || ಸಿಟ್ಟು ತಾಳ್ದ ವಟುವೇ ಖಳರ ಸಿಟ್ಟಿಲಿ ಅಳೆದೆಯಾ ವಿಠಲಾ ||೪|| ಕಟ್ಟಿ ಕಡಲಲಿ ಜಗ ಜಟ್ಟಿ ಗೋಪನಾಗಿ ಬುದ್ಧಾ|| ದಿಟ್ಟ ಕಲ್ಕ್ಯಾವತಾರ ತಾಳಿ…
Transliteration
viThalA piDi ennakaiyA viThalA panDharirAyA||pa|| viThala BaktavatsalA viThala hari viThalA ||apa|| diTTa punDalIka tanna puTTisidavara mana| muTTi Bajisalu citta goTTu bandeyA viThalA ||1|| koTTa mAtige Baktara kaTTinoLu siluki kan|| geTTeyaBavAbdiyali ninna guTTu tOrayya viThalA ||2|| biTTu baralAgada ninage thaTTane nIDalu caluva|| iTTigeya mEle anGri padma iTTu ninteyA viThalA||3|| neTTane vEd…