Haridasa Sahitya — Vyasadasa
Vithala ninna nambide enna kayo
ವಿಠಲಾ ನಿನ್ನ ನಂಬಿದೆ ಎನ್ನ ಕಾಯೋ
Composer: Vijaya Dasaru · Deity: Hari · Genre: Bhakti
Kannada lyrics
ವಿಠಲಾ ನಿನ್ನ ನಂಬಿದೆ ಎನ್ನ ಕಾಯೋ | ಪುಟ್ಟುವದು ಬಿಡಿಸೊ ಎನ್ನವರೊಳಗಿರಿಸೊ ||pa|| ಬಲುಕಾಲ ಮಲ-ಮೂತ್ರ ಡೊಳ್ಳಿನೊಳು ಬಿದ್ದು | ಹಲುಬಿದೆ ಒಂದಿಷ್ಟು ನೆಲೆಗಾಣದೆ ನಾನು || ಹಲವು ಮಾತೇನು ಎನಗೆ ಬಿಡದು | ಸಲಹಬೇಕಯ್ಯಾ ಸಮುದ್ರ ಶಯ್ಯಾ ||1|| ಕರ ಪಿಡಿದು ಎತ್ತುವ ಬಿರುದು ಪರಾಕ್ರಮ | ಮರಳಿ ಮಿಗಿಲೊಂದು ದೇವರಿಗೆ ಉಂಟೆ || ಮರೆವು ಮಾಡದೆ ಮಹಾದುರಿತವ ಪರಿ_ | ಹರಿಸು ಸ್ಮರಣೆಯನ್ನು ಇತ್ತು ಕೀರ್ತನೆ ಪೇಳಿಸೋ||2|| ಬಿನ್ನಹ ಲಾಲಿಸು ಚೆನ್ನ ಲಕುಮಿಪತಿ | ಚೆನ್ನಾಗಿಡು ನಿತ್ಯ ಪ್ರಾಣನಾಥಾ ಅಭಯ ಹಸ್ತಾ || ಅನ್ನದಾತಾ ಸಿರಿ ವಿಜಯವಿಠ್ಠಲರೇಯಾ | ಸನ್ನಿಧಿಯಲ್ಲಿ ಎನ್ನ ಸಂತೋಷಪಡಿಸೊ ||3||
Transliteration
Vithala ninna nambide enna kayo Puttuvadu bidiso ninnavarolagiriso ||pa|| Bahukala malamutra dollinolu biddu Halubide ondishtu neleganade nanu Halavu matenu enage bidadu Salahabekayya samudrasayya ||1|| Karapididu ettuva birudu parakrama Marali migilondu devarige umte Marevu madade mahaduritava pari Harisu smaraneyannu ittu kirtane peliso ||2|| Binnaha lalisu cenna lakumipati Chennagidu nitya pran…