Haridasa Sahitya — Vyasadasa

Virata roopa sulaadhi

ವಿರಾಟ ರೂಪ ಸುಳಾದಿ

Composer: Vijaya Dasaru · Deity: Hari · Genre: Sulaadi

Kannada lyrics

ವಿರಾಟ ರೂಪ ಸುಳಾದಿ ಧೃವತಾಳ ಆಲಿಸಿ ಕೇಳುವುದು ಆದರದಿಂದಲಿ | ಶ್ರೀ ಲಕುಮೀಶನ ಭಕುತರೆಲ್ಲ | ಕಾಲ ದೇಶ ವ್ಯಾಪ್ತಳೆನಿಪಳಿಗಾದರು | ಶೀಲ ಮೂರುತಿ ಇಂದ ಸುಖವೆಂಬೋದೋ | ಕೇಳಿಬಲ್ಲದ್ದೆಸರಿ ಶ್ರುತಿ ಸ್ಮೃತಿ ಮುಖದಿಂದ | ಆಲೋಚನೆ ಇದಕ್ಕಿಲ್ಲ ಎಣಿಸಿಗುಣಿಸು | ಮೂಲಜೀವರ ಸುಖಕೆ ಶ್ರೀಪತಿ ಆದ ಬಳಿಕ | ಹಲವು ಬಗೆಯಲಿ ಹರಿಯ ಸಂಪಾದಿಸಿಸು | ಇಳಿಯೋಳು ವಾಜಿಪೇಯ ಪೌಂಡರಿಕಾದಿ ಯಜ್ಞ | ನಿರ್ಮಲವಾದ ಧ್ಯಾನ ಜಪ ನೇಮವೋ | ಜಾಲ ನಕ್ಷತ್ರ ಸಂಖ್ಯ ಮೀರಿದ ಮಹಾದಾನಾ | ಕಾಲೋಚಿತವಾದ ಕರ್ಮ ಧ್ಯಾನ ಮೌನ | ಜ್ವಾಲವಾದ ಕ್ರೂರ ತಪ ಹೋಮ ಸುರರರ್ಚನ | ಸ್ಥೂಲ ಕರ್ಮಾಭಿಜಾತ ಪುಣ್ಯದಿಂದ | ತ್ರಿಲೋಕಾಧಿಪತಿ ಸ್ಥಾನ ವೈದಿದ ನಂತರ | ಇಳಿಯಬೇಕೊ ಧರಿಗೆ…

Transliteration

Dhruva tala Alisi keluvudu Adaradindali | Sri lakumisana Bakutarella | Kala desa vyaptalenipaligadaru | Sila muruti inda sukavembodo | Keliballaddesari Sruti smruti mukadinda | Alochane idakkilla enisigunisu | Mulajivara sukake sripati Ada balika | Halavu bageyali hariya sampadisisu | Iliyolu vajipeya paundarikadi yaj~ja | Nirmalavada dhyana japa nemavo | Jala nakshatra sankya mirida mahadana | Ka…