Haridasa Sahitya — Vyasadasa

Vijayindra munindra

ವಿಜಯೀ೦ದ್ರ ಮುನೀಂದ್ರರೆಂಬಾಶ್ಚರ್ಯದ

Composer: Purandara Dasaru · Deity: Vijayeendra Teertharu · Genre: Dasara Pada

Kannada lyrics

ವಿಜಯೀ೦ದ್ರ ಮುನೀಂದ್ರರೆಂಬಾಶ್ಚರ್ಯದ । ಗಜೇಂದ್ರ ಬಂದಿದೆ ಸುಜನರು ನೋಡ ಬನ್ನಿ ।। ಪ ।। ಕಲುಷವೆಂಬ ಪಂಕವ ನೀಡಾಡಿ । ವಿ । ಮಲ ಹರಿ ಪದ ತೀರ್ಥದ ಜಲಪಾನ ಮಾಡಿ । ಸಲೆ ಮಧ್ವಮತಾಂಬುಧಿಯೊಳು । ನಲಿ ನಲಿದು ಕುಣಿದಾಡುತಲಿ ।। 1 ।। ರಮೇಶನ ಧ್ಯಾನವೆಂಬ ಮದವೇರಿ । ಮಮತೆಯೆಂಬ ಕದಳಿ ಕಿತ್ತೀಡಾಡಿ । ವಿಮಲ ಶ್ರೀಹರಿ ಪದ ರಜ ಶಿರದಿ ಧರಿಸಿ । ಕುಮತಗಳೆಂಬ ತರುಗಳ ಮುರಿಯುತಲಿ ।। 2 ।। ಗುರು ಸುರೇಂದ್ರತೀರ್ಥರೆಂಬ । ವರ ಮಾವಟಿಗನ ಆಜ್ಞೆಯೊಳಿದ್ದು । ಗುರು ಪುರಂದರವಿಠಲ ಭಕ್ತಿಯೆಂಬ । ಸರಪಣಿಯೊಳು ನಲಿ ನಲಿದಾಡುತಲಿ ।। 3 ।।

Transliteration

Vijayindra munindrarembascaryada | Gajendra bandide sujanaru noda banni || pa || Kalushavemba pankava nidadi | vi | Mala hari pada tirthada jalapana madi | Sale madhvamatambudhiyolu | Nali nalidu kunidadutali || carana || 1 || Ramesana dhyanavemba madaveri | Mamateyemba kadali kittidadi | Vimala srihari pada raja Siradi dharisi | Kumatagalemba tarugala muriyutali || 2 || Guru surendratirtharemba |…