Haridasa Sahitya — Vyasadasa
Prarthana sulaadhi
ಪ್ರಾರ್ಥನಾ ಸುಳಾದಿ
Composer: Sri Vijayeendra Teertharu · Deity: Hari · Genre: Sulaadi
Kannada lyrics
ಪ್ರಾರ್ಥನಾ ಸುಳಾದಿ ರಾಗ: ಶುಭಪಂತುವರಾಳಿ ಧ್ರುವತಾಳ ಯಾಕೆಲ ಮನವೇ ನೀ ಎನ್ನ ಕೀಕಟ ದೇಶಕ್ಕೆ ಎಳೆದು ಇಂದು? ಲೋಕೈಕನಾಥ ಹರಿಯ ಪಾದಕೆ ಎನ್ನನು ದೂರನ ಮಾಡಿ ಇಂದು. ಮಾರ್ಕೆಲ್ಲ ಜಿಹ್ವೆ ಲೋಕವಾರ್ತೆಗಳ ಸೇವಿಪದು. ಶ್ರೀಕಾಂತನ ವಾರ್ತೆ ನುಡಿಸಿದಂತೆ ಮಾಡಿದ್ಯಾಕೆಲ್ಲ? ಕಿವಿಯೇ, ಪೋಕರ ಆಲಾಪಗಳ ಕೇಳಿ ಕೆಡದೀ. ಯಾಕೆಲ್ಲ ಕಣ್ಣೇ, ಪರವಧುಗಳ ಆಲೋಕಿಸಿ ಎನ್ನನು ಬಳಲಿಸಿದಿ? ಸಾಕು ಸಾಕು ನಮ್ಮ ಸಂಗತ ಎಂಬಂತೆ ನೀ ಮಾಡಿದಿ. ಕಾಕು ಮಾಡದೆನ್ನ ಸಿರಿ ವಿಜಯೀಂದ್ರ ರಾಮನ ಅಗಲಿಸಿದಿರಿ ॥೧॥ ಮಟ್ಟತಾಳ ಹರಿಚಿಂತನ, ನಾಮ, ಮೂರ್ತಿ, ಕೀರ್ತಿಗಳ ವಿರಚಿಸಿ ಸವಿಯದೆ, ನೋಡದೆ, ಕೇಳದೆ, ಕರಣಗಳಿದ್ದಡೆ ಇಲ್ಲದಿದ್ದರೇನು? ಹರಿಗೆ ಸನ್ಮುಖವಾಗದ ಕರಣ, ಕರ…