Haridasa Sahitya — Vyasadasa

Vijayaraya bhajiso he manuja

ವಿಜಯರಾಯ ಭಜಿಸೋ ಹೇ ಮನುಜಾ

Composer: Haridasa · Deity: Vijaya Dasaru · Genre: Dasara Pada

Kannada lyrics

ವಿಜಯರಾಯ ಭಜಿಸೋ ಹೇ ಮನುಜಾ ನೀ ||pa|| ವಿಜಯರಾಯರ ಪಾದ ಭಜಿಸುವ ಮನುಜರ ವೃಜಿನ ವಾರಿಧಿಗೆ ಕುಂಭಜರೆನಿಸಿದ ಗುರು ||a.pa|| ಮೊದಲು ಬೃಗುಮುನಿರೂಪದಿ ಶೀ- ಘ್ರದಿ ಪೋಗಿ ಬರಲು ಶ್ರೀಹರಿ ಲೋ- ಕದಿ ವಿಧಿ ವಿಷ್ಣು ಶಿವರೊಳು ಪದುಮನಾಭನಕಿಂತ ಅಧಿಕರಿಲ್ಲೆಂದು ನಾ ರದ ಮುನಿಗರುಹಿದ ||1|| ಜಗದೊಳು ಸಕಲ ಕ್ಷೇತ್ರ ತೀರ್ಥಗಳ ಮಹಿಮೆಯ ವರ್ಣಿಸುತ ಖಗರಾಜ ಗಮನ ಶ್ರೀ ಭಗವದ್ಗುಣಗಳನ್ನು ಬಗೆ ಬಗೆ ಪದಸುಳಾದಿಗಳಿಂದ ತುತಿಸಿದ ||2|| ಕಾಶಿಯೊಳಗೆ ಸಂಪ್ರಾಪ್ತ ಪುರಂದರ ದಾಸರಿಂದಲಿ ಅಂಕಿತ ಶೇಷಶಯನ ಶ್ರೀನಿವಾಸ ‘ಕಾರ್ಪರನರ- ಕೇಸರಿ ‘ ಗತಿ ಪ್ರಿಯ ದಾಸರೆಂದೆನಿಸಿದ ||3|| vijayarAya BajisO hE manujA nI ||pa||

Transliteration

vijayarAyara pAda Bajisuva manujara vRujina vAridhige kuMBajarenisida guru ||a.pa|| modalu bRugumunirUpadi SI- Gradi pOgi baralu SrIhari lO- kadi vidhi viShNu SivaroLu padumanABanakinta adhikarilleMdu nA rada munigaruhida ||1|| jagadoLu sakala kShEtra tIrthagaLa mahimeya varNisuta KagarAja gamana SrI BagavadguNagaLannu bage bage padasuLAdigaLiMda tutisida ||2|| kASiyoLage saMprApta purandara dAsar…